ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು (ಫಾಲೋವರ್ಸ್) ಹೊಂದಿದ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.
2009ರ ಸೆಪ್ಟೆಂಬರ್‌ನಲ್ಲಿ ಟ್ವಿಟರ್ ಖಾತೆ ತೆರೆದಿರುವ ಕೊಹ್ಲಿಯನ್ನು ವಿಶ್ವದಾದ್ಯಂತ ಇರುವ 5 ಕೋಟಿಗೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ವಿಶ್ವದ ಬೇರೆ ಯಾವ ಕ್ರಿಕೆಟರ್‌ಗೂ ಇಷ್ಟು ಸಂಖ್ಯೆಯ ಫಾಲೋವರ್ಸ್‌ಗಳಿಲ್ಲ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಶತಕ ಗಳಿಸಲು ಪರದಾಡುತ್ತಿದ್ದ ವಿರಾಟ್, ಇತ್ತೀಚೆಗೆ ಮುಕ್ತಾಯವಾದ ಏಷ್ಯಾ ಕಪ್ ಟೂರ್ನಿಯಲ್ಲಿ 'ಮೂರಂಕಿ' ರನ್ ಬಾರಿಸಿ ಮಿಂಚಿದ್ದರು. ಅವರು ಈ ಬಾರಿಯ ಟೂರ್ನಿಯಲ್ಲಿ ಆಡಿದ 5 ಇನಿಂಗ್ಸ್‌ಗಳಲ್ಲಿ 92ರ ಸರಾಸರಿಯಲ್ಲಿ276 ರನ್ ಕಲೆಹಾಕಿದ್ದರು.
33 ವರ್ಷದಕೊಹ್ಲಿಯನ್ನು ಇನ್‌ಸ್ಟಾಗ್ರಾಂನಲ್ಲಿ 21.1 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಫುಟ್‌ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ (47.6 ಕೋಟಿ) ಹಾಗೂ ಲಿಯೋನೆಲ್ ಮೆಸ್ಸಿ (35.6 ಕೋಟಿ) ಮಾತ್ರವೇ ಕೊಹ್ಲಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಅಥ್ಲೀಟ್‌ಗಳೆನಿಸಿದ್ದಾರೆ.
ವಿರಾಟ್‌ಗೆ ಫೇಸ್‌ಬುಕ್‌ನಲ್ಲಿಯೂ 4.9 ಕೋಟಿ ಫಾಲೋವರ್ಸ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.