ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯವನ್ನು ಕಂಡಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಆರು ರನ್ ಗಳಿಸಿ ಔಟ್ ಆಗಿದ್ದ ವಿರಾಟ್ ದ್ವಿತೀಯ ಇನಿಂಗ್ಸ್‌ನಲ್ಲಿ 37 ಎಸೆತಗಳಲ್ಲಿ 17 ರನ್ ಗಳಿಸಿ ಉತ್ತಮವಾಗಿ ಮೂಡಿಬಂದಿದ್ದರು.
ಆದರೆ ಅಂಪೈರ್ ಎಲ್‌ಬಿಡಬ್ಲ್ಯು ಎಂದು ತೀರ್ಪು ನೀಡಿದ್ದರಿಂದ ಚೆಂಡು ಬ್ಯಾಟ್‌ಗೆ ತಗುಲಿದರೂ ಡಿಆರ್‌ಎಸ್ ಮನವಿ ಪಡೆಯದೇ ತಮ್ಮ ವಿಕೆಟ್ ಅನ್ನು ಕಳೆದುಕೊಂಡಿದ್ದಾರೆ.
ಆಗಿದ್ದೇನು?
19.2ನೇ ಓವರ್‌ನಲ್ಲಿ ಬಾಂಗ್ಲಾ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಎಸೆತದಲ್ಲಿ ವಿರಾಟ್ ಕೊಹ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸುತ್ತಾರೆ.
ಈ ವೇಳೆ ಎಲ್‌ಬಿಡಬ್ಲ್ಯುಗಾಗಿ ಬೌಲರ್ ಬಲವಾದ ಮನವಿ ಮಾಡುತ್ತಾರೆ. ಎದುರಾಳಿ ತಂಡದ ಮನವಿ ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದರು.
ಈ ವೇಳೆ ಗೊಂದಲಕ್ಕೀಡಾದ ಕೊಹ್ಲಿ, ನಾನ್ ಸ್ಟ್ರೈಕರ್‌ನಲ್ಲಿ ಶುಭಮನ್ ಗಿಲ್ ಅವರ ಸಲಹೆಯನ್ನು ಪಡೆಯುತ್ತಾರೆ. ಬಳಿಕ ಡಿಆರ್‌ಎಸ್ ಮನವಿ ಪಡೆಯದಿರಲು ನಿರ್ಧರಿಸುತ್ತಾರೆ.
ವಿರಾಟ್ ಕೊಹ್ಲಿ ತಲೆ ತಗ್ಗಿಸುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಾರೆ. ಬಳಿಕ ರಿಪ್ಲೇಯಲ್ಲಿ ವಿರಾಟ್ ಅವರ ಬ್ಯಾಟ್‌ಗೆ ಚೆಂಡು ತಗುಲಿರುವ ದೃಶ್ಯ ಕಂಡುಬರುತ್ತದೆ.
ಈ ವೇಳೆ ಪೆವಿಲಿಯನ್‌ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಸಹ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.