ADVERTISEMENT

16 Years Of Virat Kohli: ಕಿಂಗ್ ಕೊಹ್ಲಿ ಪ್ರಮುಖ ಸಾಧನೆಗಳ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2024, 10:57 IST
Last Updated 18 ಆಗಸ್ಟ್ 2024, 10:57 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ಬೆಂಗಳೂರು: 'ರನ್ ಮೆಷಿನ್' ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 16 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ.

ADVERTISEMENT

ಸಚಿನ್ ತೆಂಡೂಲ್ಕರ್ ಬಳಿಕ ಭಾರತ ಕಂಡ ಅತ್ಯಂತ ಯಶಸ್ವಿ ಬ್ಯಾಟರ್ ಎನಿಸಿರುವ ವಿರಾಟ್ ಕೊಹ್ಲಿ, ಈ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ.

ಏಕದಿನ ಹಾಗೂ ಟ್ವೆಂಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೆನಿಸುವ ಮೂಲಕ ವಿರಾಟ್, ಭಾರತೀಯ ಕ್ರಿಕೆಟ್‌ನ ದಿಗ್ಗಜರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ, ಟ್ವೆಂಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಸಹ ಆಟಗಾರರು, ಮಾಜಿಗಳು ವಿರಾಟ್ ಕೊಹ್ಲಿ ಅವರಿಗೆ ಶುಭ ಹಾರೈಸಿದ್ದಾರೆ. ವಿರಾಟ್ ಕೊಹ್ಲಿ ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದು, ಅವರಿಂದ ಕಲಿತುಕೊಳ್ಳುವುದು ತುಂಬಾನೇ ಇದೆ ಎಂದು ಗುಣಗಾನ ಮಾಡಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ ಹಾಗೂ ಸಾಧನೆಗಳ ಪ್ರಮುಖ ಪಟ್ಟಿ ಇಲ್ಲಿದೆ:

2019: ಐಸಿಸಿ ಕ್ರೀಡಾಸ್ಫೂರ್ತಿಯ ಪ್ರಶಸ್ತಿ

2012, 2017, 2018, 2023: ಐಸಿಸಿ ವರ್ಷದ ಏಕದಿನ ಆಟಗಾರ

2018: ಐಸಿಸಿ ವರ್ಷದ ಟೆಸ್ಟ್ ಆಟಗಾರ

2012, 2014, 2016-2019: ಐಸಿಸಿ ವರ್ಷದ ಏಕದಿನ ತಂಡದ ಆಟಗಾರ

2017-2019: ಐಸಿಸಿ ವರ್ಷದ ಟೆಸ್ಟ್ ತಂಡದ ಆಟಗಾರ

2022: ಐಸಿಸಿ ವರ್ಷದ ಟಿ20 ತಂಡದ ಆಟಗಾರ

2013: ಅರ್ಜುನ ಪ್ರಶಸ್ತಿ

2017: ಪದ್ಮಶ್ರೀ

2018: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ

2011-2020: ಐಸಿಸಿ ಪುರುಷರ ದಶಕದ ಏಕದಿನ ಕ್ರಿಕೆಟಿಗ

2017,2018: ಐಸಿಸಿ ವರ್ಷದ ಕ್ರಿಕೆಟಿಗ

2011-2020: ಸರ್ ಗ್ಯಾರಿ‌ಫೀಲ್ಡ್ ಸೋಬರ್ಸ್ ಟ್ರೋಫಿ

21: ಅತಿ ಹೆಚ್ಚು ಸರಣಿಶ್ರೇಷ್ಠ ಪುರಸ್ಕಾರ (ಎಲ್ಲ ಮೂರು ಮಾದರಿಗಳು ಸೇರಿ)

13,000: ಏಕದಿನದಲ್ಲಿ ಅತಿ ವೇಗದಲ್ಲಿ 13,000 ರನ್ ಸಾಧನೆ (267 ಪಂದ್ಯ)

3,500: ಟಿ20ನಲ್ಲಿ ಅತಿ ವೇಗದಲ್ಲಿ 3,500 ರನ್ ಸಾಧನೆ (96)

39: ಟಿ20ನಲ್ಲಿ ಅತಿ ಹೆಚ್ಚು ಅರ್ಧಶತಕ ಸಾಧನೆ

50: ಏಕದಿನದಲ್ಲಿ ಅತಿ ಹೆಚ್ಚು ಶತಕ

10: ಏಕದಿನದಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ಶತಕ (ಶ್ರೀಲಂಕಾ ವಿರುದ್ಧ)

765 ರನ್: ಏಕದಿನ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ದಾಖಲೆ (2023ರ ಏಕದಿನ ವಿಶ್ವಕಪ್)

(ಮಾಹಿತಿ ಕೃಪೆ: ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ)

ಟೆಸ್ಟ್:

ಪಂದ್ಯ: 113

ಇನಿಂಗ್ಸ್: 191

ಅಜೇಯ: 11

ರನ್: 8,848

ಗರಿಷ್ಠ: 254

ಸರಾಸರಿ: 49.16

ಶತಕ: 29

ದ್ವಿಶತಕ: 7

ಅರ್ಧಶತಕ: 30

ಏಕದಿನ:

ಪಂದ್ಯ: 295

ಇನಿಂಗ್ಸ್: 283

ಅಜೇಯ: 44

ರನ್: 13,906

ಗರಿಷ್ಠ: 183

ಸರಾಸರಿ: 58.18

ಶತಕ: 50

ಅರ್ಧಶತಕ: 72

ಟ್ವೆಂಟಿ-20:

ಪಂದ್ಯ: 125

ಇನಿಂಗ್ಸ್: 117

ಅಜೇಯ: 31

ರನ್: 4188

ಗರಿಷ್ಠ: 122

ಸರಾಸರಿ: 48.7

ಶತಕ: 1

ಅರ್ಧಶತಕ: 38

ಐಪಿಎಲ್:

ಪಂದ್ಯ: 252

ಇನಿಂಗ್ಸ್: 244

ಅಜೇಯ: 37

ರನ್: 8,004

ಗರಿಷ್ಠ: 113

ಸರಾಸರಿ: 38.67

ಶತಕ: 8

ಅರ್ಧಶತಕ: 55

ಪಾದರ್ಪಣೆ:

ಏಕದಿನ: 18ನೇ ಆಗಸ್ಟ್ 2008, ಶ್ರೀಲಂಕಾ ವಿರುದ್ಧ ದಾಂಬುಲಾ.

ಟೆಸ್ಟ್: 20ನೇ ಜೂನ್ 2011, ವೆಸ್ಟ್‌ಇಂಡೀಸ್ ವಿರುದ್ಧ, ಸಬೀನಾ ಪಾರ್ಕ್.

ಟಿ20: 12ನೇ ಜೂನ್ 2010, ಜಿಂಬಾಬ್ವೆ, ಹರಾರೆ.

(ಮಾಹಿತಿ ಕೃಪೆ: ಕ್ರಿಕ್ ಬಜ್)

ರೋಹಿತ್ ಶರ್ಮಾ ಸೇರಿದಂತೆ ಸಹ ಆಟಗಾರರಿಂದ ಗುಣಗಾನ

ತಮ್ಮ ಅನುಭವ ಹಂಚಿಕೊಂಡ ವಿರಾಟ್

ವಿರಾಟ್ ಕೊಹ್ಲಿ ಸಾಧನೆ

ಕೋಚ್ ಗೌತಮ್ ಗಂಭೀರ್ ಗುಣಗಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.