ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಟೂರ್ನಿ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕತ್ವ ತೊರೆಯಲು ಸಜ್ಜಾಗಿದ್ದಾರೆ. ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದಲೂಈಗಾಗಲೇ ಕೆಳಗಿಳಿದಿದ್ದಾರೆ.
ಭಾರತ ತಂಡಕ್ಕೆಮೂರೂ ಮಾದರಿಯಲ್ಲಿ ನಾಯಕನಾಗಿರುವಕೊಹ್ಲಿ, ಇದುವರೆಗೆ ಐಸಿಸಿಯ ಒಂದೇಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ, ಅವರನ್ನು ʼವಿಫಲ ನಾಯಕʼ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಟೀಕಿಸಿದ್ದಾರೆ.
ನ್ಯೂಜಿಲೆಂಡ್‌ವಿರುದ್ಧದ ಮಹತ್ವದ ಪಂದ್ಯದಲ್ಲಿತಂಡದ ಬ್ಯಾಟಿಂಗ್‌ಕ್ರಮಾಂಕದ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟುಹಿರಿಯ ಕ್ರಿಕೆಟಿಗರು ಕೊಹ್ಲಿ ನಾಯಕತ್ವವನ್ನು ಟೀಕಿಸಿದ್ದಾರೆ.ಈ ಪಂದ್ಯದಲ್ಲಿತಂಡದ ಆಟಗಾರರುಧೈರ್ಯವಾಗಿ ಆಡಲಿಲ್ಲ ಎಂದು ಕೊಹ್ಲಿಯೇ ಹೇಳಿದ್ದರು. ಹೀಗಾಗಿಟೀಂ ಇಂಡಿಯಾದ ಪ್ರದರ್ಶನ ಶೈಲಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು,ಟಿ20 ವಿಶ್ವಕಪ್‌ನಿಂದ ಗುಂಪು ಹಂತದಲ್ಲೇ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ. ಭಾರತದ ಹಿನ್ನಡೆಗೆಹಲವು ಕಾರಣಗಳನ್ನು ಪಟ್ಟಿ ಮಾಡಿರುವ ಕನೇರಿಯಾ, ಅವುಗಳಲ್ಲಿ ಕೊಹ್ಲಿ ನಾಯಕತ್ವೇ ಮೊದಲನೆಯದು ಎಂದಿದ್ದಾರೆ.
ʼಸಾಕಷ್ಟು ಕಾರಣಗಳಿವೆ. ಮೊದಲನೆಯದು ವಿರಾಟ್ ಕೊಹ್ಲಿ. ಅವರು ವಿಫಲ ನಾಯಕ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಸರಿಯಾದ ತಂಡವನ್ನು ಆಯ್ಕೆ ಮಾಡಿರಲಿಲ್ಲ. ವಿರಾಟ್ ಆಸ್ಟ್ರೇಲಿಯಾದಲ್ಲಿದ್ದಾಗ (ಟೆಸ್ಟ್ ಸರಣಿಯಲ್ಲಿ) ಭಾರತ ಸೋಲು ಕಂಡಿತ್ತು. ಬಳಿಕ ಅಜಿಂಕ್ಯ ರಹಾನೆ ನಾಯಕರಾಗಿ,ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ವಿರಾಟ್ ಕೊಹ್ಲಿ ದೊಡ್ಡ ಆಟಗಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಅವರಲ್ಲಿ ನಾಯಕತ್ವದ ಸಾಮರ್ಥ್ಯವನ್ನೇ ನಾನು ಕಂಡಿಲ್ಲ. ಅವರು ಸಾಕಷ್ಟು ಆಕ್ರಮಣಶೀಲತೆಯನ್ನು ಹೊಂದಿದ್ದಾರೆ. ಆದರೆ, ನಾಯಕನಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅವರಲ್ಲಿ ಇಲ್ಲʼ ಎಂದು ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ಕನೇರಿಯಾ ವಿವರಿಸಿದ್ದಾರೆ.
ಭಾರತದ ವೈಫಲ್ಯದಲ್ಲಿ ಕೋಚ್ ರವಿಶಾಸ್ತ್ರಿ ಅವರ ಪಾಲೂ ಇದೆ ಎಂದು ಅವರು ಕುಟುಕಿದ್ದಾರೆ.
ʼಮತ್ತೊಂದು ಕಾರಣ ಸದ್ಯನಾಪತ್ತೆಯಾಗಿರುವ ರವಿಶಾಸ್ತ್ರಿ. ಅವರು (ಶಾಸ್ತ್ರಿ) ʼನನ್ನ ಅವಧಿಯಲ್ಲಿ ಈ ವಿಶ್ವಕಪ್ ಟೂರ್ನಿಯೇ ಕೊನೆ. ನನ್ನ ಸಮಯ ಮುಗಿದಿದೆʼ ಎಂದು ಭಾವಿಸಿದಂತಿದೆ.ಈಗಷ್ಟೇ ತಂಡ ಕೂಡಿಕೊಂಡಿರುವ ಎಂಎಸ್ ಧೋನಿ ಅವರನ್ನು ಹೆಚ್ಚು ದೂಷಿಸಲು ಹೋಗುವುದಿಲ್ಲ.ಆದರೂ, ಅವರೂ ನಿರ್ವಹಣೆಯ ಭಾಗವಾಗಿದ್ದರು.ನಿರ್ವಹಣೆ ವಿಭಾಗದಂತೆಯೇ ಎಲ್ಲ ಹನ್ನೊಂದು ಆಟಗಾರರನ್ನು ಕ್ರಿಕೆಟ್ ಒಳಗೊಂಡಿರುತ್ತದೆ. ಹಾಗಾಗಿ ಎಲ್ಲರೂ ಜವಾಬ್ದಾರರು. ಇದು ವೈಯಕ್ತಿಕಆಟವಲ್ಲ. ಹಿನ್ನಡೆಯಲ್ಲಿ ಇಡೀ ತಂಡವೇ ಹೊಣೆಯಾಗಿದೆʼ ಎಂದು ಕನೇರಿಯಾ ಹೇಳಿದ್ದಾರೆ.
ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20ಸರಣಿ ವೇಳೆ,2021ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಕೊಹ್ಲಿ ಹೇಳಿದ್ದರು ಎಂದು ನೆನಪಿಸಿಕೊಂಡಿರುವ ಕನೇರಿಯಾ, ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ (ಪಾಕಿಸ್ತಾನ ಎದುರು)ರಾಹುಲ್ ಜೊತೆ ರೋಹಿತ್ ಇನಿಂಗ್ಸ್ ಆರಂಭಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ (ನ್ಯೂಜಿಲೆಂಡ್ ವಿರುದ್ಧ) ರೋಹಿತ್ ಬದಲು ಇಶಾನ್ ಕಿಶನ್ ಆರಂಭಿಕರಾಗಿ ಆಡಿದ್ದರು. ತಂಡದ ಅತ್ಯುತ್ತಮ ಸಂಯೋಜನೆಗೆ ಸಂಬಂಧಿಸಿದಂತೆ ಕೊಹ್ಲಿಯ ಚಿಂತನೆಗಳಲ್ಲಿಗೊಂದಲವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ʼಆರ್‌ಸಿಬಿ ಪರ ಆರಂಭಿಕನಾಗಿ ಆಡುವಾಗ ವಿಶ್ವಕಪ್‌ನಲ್ಲಿ ನಾನೇ ಇನಿಂಗ್ಸ್ ಆರಂಭಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದರು. ವಿಶ್ವಕಪ್ ಸಮೀಪಿಸುತ್ತಿದ್ದಂತೆ ರಾಹುಲ್ ಮತ್ತು ರೋಹಿತ್‌ಗಿಂತ ಉತ್ತಮ ಆರಂಭಿಕರು ಇಲ್ಲ. ಹಾಗಾಗಿಅವರೇ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದ್ದರು. ಹೀಗಿದ್ದ ಮೇಲೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಕಿಶನ್ ಎಲ್ಲಿಂದ ಬಂದರು? ಈ ಗೊಂದಲವೇ ನನಗೆ ಅರ್ಥವಾಗುತ್ತಿಲ್ಲ. ರೋಹಿತ್ ಶರ್ಮಾ ಉಪನಾಯಕ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅವರಿಗಿಂತಲೂ (ರೋಹಿತ್‌ಗಿಂತ) ವೇಗಿ ಟ್ರೆಂಟ್ ಬೌಲ್ಟ್‌ಮುಂದಿದ್ದಾರೆ ಎಂದು ಭಾವಿಸಿ ವಿಭಿನ್ನ ಪ್ರಯತ್ನ ಮಾಡಲಾಗಿದೆʼ ಎಂದು ಹೇಳಿದ್ದಾರೆ.
ಇವನ್ನೂ ಓದಿ
*T20 WC | ವಿಶ್ವಕಪ್ ಇತಿಹಾಸದಲ್ಲೇ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಮೊದಲ ಸೋಲು
*T20 WC: ಕಿವೀಸ್ ವಿರುದ್ಧ ಹೀನಾಯ ಸೋಲು; ಕೊಹ್ಲಿ ಪಡೆಗೆ ಮುಖಭಂಗ
*T20 WC: ಈಗಲೂ ಭಾರತದ ಸೆಮಿಫೈನಲ್ ಪ್ರವೇಶ ಸಾಧ್ಯ; ಹೇಗೆ ಗೊತ್ತಾ?
*ಕಿವೀಸ್ ವಿರುದ್ಧ ಏನೇ ತಂತ್ರ ಮಾಡಿದರೂ ಫಲಿಸಲಿಲ್ಲ: ಸಚಿನ್ ತೆಂಡೂಲ್ಕರ್
*ರೋಹಿತ್ ಶರ್ಮಾ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯನ್ನು ಪ್ರಶ್ನಿಸಿದ ಗವಾಸ್ಕರ್
*'ತಂಡದಲ್ಲಿ ಧೈರ್ಯ ಇರಲಿಲ್ಲ' - ಕೊಹ್ಲಿಯಿಂದ ಅತ್ಯಂತ ದುರ್ಬಲ ಹೇಳಿಕೆ: ಕಪಿಲ್
*ಭಾರತ ಅತ್ಯುತ್ತಮ ತಂಡ; ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಬೆಂಬಲ
*ಭಾರತದ ಸೋಲಿಗೆ ಕಾರಣಗಳ ಹುಡುಕಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.