ನಾಗ್ಪುರ: ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆರ್. ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 31ನೇ ಬಾರಿಗೆ ಈ ಸಾಧನೆ ಮಾಡಿದ ಶ್ರೇಯಕ್ಕೆ ಭಾಜನರಾದರು.
ನಗರದಲ್ಲಿರುವ 'ವಿದರ್ಭ ಕ್ರಿಕೆಟ್ ಸಂಸ್ಥೆ' ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 177 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ ತಂಡ 400 ರನ್ ಕಲೆಹಾಕಿತ್ತು. 228 ರನ್‌ಗಳ ಹಿನ್ನಡೆಯೊಂದಿಗೆ ಮೂರನೇ ದಿನ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 91 ರನ್ ಗಳಿಸಿ ಆಲೌಟ್ ಆಗುವುದರೊಂದಿಗೆ ಇನಿಂಗ್ಸ್ ಹಾಗೂ 132 ರನ್ ಅಂತರದ ಸೋಲೊಪ್ಪಿಕೊಂಡಿದೆ.
ಸ್ಪಿನ್ ಬಲೆ ಎಣೆದ ಆರ್.ಅಶ್ವಿನ್ ಐದು ವಿಕೆಟ್ ಕಿತ್ತರೆ, ರವೀಂದ್ರ ಜಡೇಜ 2 ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ಉರುಳಿಸಿದರು. ಇನ್ನೆರಡು ವಿಕೆಟ್‌ಗಳು ವೇಗಿ ಮೊಹಮ್ಮದ್ ಶಮಿ ಪಾಲಾದವು.
ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಸಾಧನೆ ಮಾಡಿದ ಹತ್ತು ಬೌಲರ್‌ಗಳು
ಬೌಲರ್ | ದೇಶ | ಪಂದ್ಯ | ಇನಿಂಗ್ಸ್ | ಒಟ್ಟು ವಿಕೆಟ್ | 5 ವಿಕೆಟ್ ಸಾಧನೆ |
ಮತ್ತಯ್ಯ ಮುರುಳೀಧರನ್ | ಶ್ರೀಲಂಕಾ | 133 | 230 | 800 | 67 ಬಾರಿ |
ಶೇನ್ ವಾರ್ನ್ | ಆಸ್ಟ್ರೇಲಿಯಾ | 145 | 273 | 708 | 37 ಬಾರಿ |
ರಿಚರ್ಡ್ ಹಡ್ಲೀ | ನ್ಯೂಜಿಲೆಂಡ್ | 86 | 150 | 431 | 36 ಬಾರಿ |
ಅನಿಲ್ ಕುಂಬ್ಳೆ | ಭಾರತ | 132 | 236 | 619 | 35 ಬಾರಿ |
ರಂಗನಾ ಹೆರಾತ್ | ಶ್ರೀಲಂಕಾ | 93 | 170 | 433 | 34 ಬಾರಿ |
ಜೇಮ್ಸ್ ಆ್ಯಂಡರ್ಸನ್ | ಇಂಗ್ಲೆಂಡ್ | 177 | 329 | 675 | 32 ಬಾರಿ |
ಆರ್.ಅಶ್ವಿನ್ | ಭಾರತ | 89 | 168 | 457 | 31 ಬಾರಿ |
ಗ್ಲೆನ್ ಮೆಗ್ರಾತ್ | ಆಸ್ಟ್ರೇಲಿಯಾ | 124 | 243 | 563 | 29 ಬಾರಿ |
ಇಯಾನ್ ಬಾಥಮ್ | ಇಂಗ್ಲೆಂಡ್ | 102 | 168 | 383 | 27 ಬಾರಿ |
ಡೇಲ್ ಸ್ಟೇಯ್ನ್ | ದಕ್ಷಿಣ ಆಫ್ರಿಕಾ | 93 | 171 | 439 | 26 ಬಾರಿ |
ಇವನ್ನೂ ಓದಿ
* IND vs AUS 1st Test: ಭಾರತಕ್ಕೆ ಇನಿಂಗ್ಸ್ ಹಾಗೂ 132 ರನ್ ಗೆಲುವು
* ರಣಜಿ ಸೆಮಿಫೈನಲ್: ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ, ಫೈನಲ್ ಪ್ರವೇಶ ಅನುಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.