ADVERTISEMENT

T20 World cup: ವಿಂಡೀಸ್‌ಗೆ ಇಂದು ಅಮೆರಿಕ ಸವಾಲು

ಪೊವೆಲ್ ಬಳಗಕ್ಕೆ ನಿರ್ಣಾಯಕ ಪಂದ್ಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 0:30 IST
Last Updated 22 ಜೂನ್ 2024, 0:30 IST
ಅಮೆರಿಕದ ಆ್ಯಂಡೀಸ್‌ ಗೌಸ್
ಎಎಫ್‌ಪಿ ಚಿತ್ರ
ಅಮೆರಿಕದ ಆ್ಯಂಡೀಸ್‌ ಗೌಸ್ ಎಎಫ್‌ಪಿ ಚಿತ್ರ   

ಬ್ರಿಜ್‌ಟೌನ್‌ (ಬಾರ್ಬಾಡೋಸ್‌): ವೆಸ್ಟ್ ಇಂಡೀಸ್ ತಂಡ, ದಿಟ್ಟ ಆಟವಾಡುತ್ತಿರುವ ಅಮೆರಿಕ ತಂಡವವನ್ನು ಶನಿವಾರ ನಡೆಯುವ ಟಿ20 ವಿಶ್ವಕಪ್‌ನ ಸೂಪರ್‌ ಎಂಟರ ಹಂತದಲ್ಲಿ ಎದುರಿಸಲಿದೆ. ವೆಸ್ಟ್‌ ಇಂಡೀಸ್ ತಂಡಕ್ಕೆ ಈ ಪಂದ್ಯ ನಿರ್ಣಾಯಕವಾಗಿದ್ದು ನಾಕೌಟ್‌ಗೆ ಮುನ್ನಡೆಯಬೇಕದರೆ ಎಚ್ಚರ ತಪ್ಪುವಂತಿಲ್ಲ.

ಗುಂಪು ಹಂತದಲ್ಲಿ ಅಜೇಯರಾಗುಳಿದಿದ್ದ ಜಂಟಿ ಆತಿಥೇಯ ವೆಸ್ಟ್‌ ಇಂಡೀಸ್‌ ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಕೈಲಿ ಎಂಟು ವಿಕೆಟ್‌ಗಳ ಸೋಲನುಭವಿಸಿತ್ತು. ಇಂಗ್ಲೆಂಡ್‌ ಬೌಲರ್‌ಗಳು 51 ಎಸೆತಗಳಲ್ಲಿ ರನ್‌ ಕೊಡದೇ ವಿಂಡೀಸರನ್ನು ಕಟ್ಟಿಹಾಕಿದ್ದರು.

ಈ ಸೋಲಿನಿಂದ ರೋವ್ಮನ್ ಪೊವೆಲ್‌ ಬಳಗ ಗುಂಪಿನಲ್ಲಿ –1.343 ರನ್‌ ರೇಟ್‌ನೊಂದಿಗೆ ತಳದಲ್ಲಿದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ADVERTISEMENT

ಪಾಕಿಸ್ತಾನ ಮೇಲೆ ಈ ತಿಂಗಳ ಆದಿಯಲ್ಲಿ ಅಮೋಘ ಜಯಗಳಿಸಿದ ನಂತರ ಅಮೆರಿಕ ಯಾವುದೇ ಪಂದ್ಯ ಗೆದ್ದಿಲ್ಲ. ಆದರೆ ಭಾರತ ವಿರುದ್ಧವೂ ಸಾಧಾರಣ ಆಟವಾಡಿದ್ದ ಆ ತಂಡ, ದಕ್ಷಿಣ ಆಫ್ರಿಕಾಕ್ಕೆ ಸೋಲುವ ಮೊದಲು ಒಂದು ಹಂತದಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ ಜಂಟಿ ಆತಿಥೇಯರು ತಮ್ಮನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಕ್ರಮಣಕಾರಿ ಬ್ರಾಂಡ್‌ನ ಆಟವಾಡಿರುವ ವೆಸ್ಟ್ ಇಂಡೀಸ್ ತಂಡ ಅದನ್ನು ಮುಂದುವರಿಸುವಂತೆ ಕಾಣುತ್ತಿದೆ.‌

ಆದರೆ ಆ ತಂಡದ ಸಮಸ್ಯೆ ಎಂದರೆ ಅನನುಭವಿ ಬೌಲಿಂಗ್‌ ದಾಳಿ ಹೊಂದಿರುವುದು. ಭರ್ಜರಿ ಆಟಕ್ಕೆ ಹೆಸರಾದ ನಿಕೋಲಸ್‌ ಪೂರನ್, ಆಂಡ್ರೆ ರಸೆಲ್‌, ಪೊವೆಲ್‌, ಶರ್ಫೆನ್‌ ರುದರ್‌ಫೋರ್ಟ್‌ ಅಂಥ ಆಟಗಾರರನ್ನು ಹೊಂದಿರುವ ವೆಸ್ಟ್ ಇಂಡೀಸ್‌ ಇದನ್ನೇ ಬಂಡವಾಳವನ್ನಾಗಿ ಮಾಡುವ ತವಕದಲ್ಲಿದೆ.

ಇಂಗ್ಲೆಂಡ್ ವಿರುದ್ದ ಪಂದ್ಯದಲ್ಲಿ ಪಕ್ಕೆಲುಬಿನ ನೋವಿಗೆ ಒಳಗಾಗಿದ್ದ ಬ್ರಾಂಡನ್ ಕಿಂಗ್ ಅವರು ಅಮೆರಿಕದ ವಿರುದ್ದವೂ ಆಡುವುದು ಅನಮಾನ. ಅವರು ಆಡದಿದ್ದಲ್ಲಿ ಅಂತಿಮ 11ರ ತಂಡದಲ್ಲಿ ಶಿಮ್ರೊನ್ ಹೆಟ್ಮೆಯರ್‌ಗೆ ಅವಕಾಶ ಸಿಗಬಹುದು.

ವೆಸ್ಟ್‌ ಇಂಡೀಸ್‌ನ ನಿಕೋಲಸ್‌ ಪೂರನ್‌ ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.