ಮೆಲ್ಬರ್ನ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಸಾಧ್ಯವಾಗುವವರೆಗೂ ಆಡುತ್ತೇನೆ ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಗಾಯದ ನಡುವೆಯೂ ದ್ವಿಶತಕ ಗಳಿಸಿ, ಅಫ್ಗಾನಿಸ್ತಾನ ವಿರುದ್ಧ ನಿರ್ಣಾಯಕ ಗೆಲುವಿಗೆ ಕಾರಣರಾಗಿದ್ದ 35 ವರ್ಷದ ಮ್ಯಾಕ್ಸ್‌ವೆಲ್, ಬಹುಶಃ ನಾನು ಆಡಲಿರುವ ಕೊನೆಯ ಟೂರ್ನಿ ಐಪಿಎಲ್ ಆಗಿರಲಿದೆ. ಇನ್ನು ಮುಂದೆ ನಡೆದಾಡಲು ಸಾಧ್ಯವಾಗದವರೆಗೂ ಐಪಿಎಲ್ ಆಡುತ್ತೇನೆ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರೊಂದಿಗೆ ಅನುಭವ ಹಂಚಿಕೊಂಡಿರುವುದನ್ನು ಮ್ಯಾಕ್ಸ್‌ವೆಲ್ ಸ್ಮರಿಸಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಉತ್ತಮ ಕ್ರಿಕೆಟಿಗನಾಗಲು ಐಪಿಎಲ್‌ನಿಂದ ತುಂಬಾ ನೆರವಾಗಿದೆ. ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟಿಗರು ಹಾಗೂ ತರಬೇತುದಾರರೊಂದಿಗೆ ಬೆರೆತು ಅನುಭವ ಸಂಪಾದಿಸಲು ಇದು ಉತ್ತಮ ವೇದಿಕೆಯಾಗಿದೆ. ಇದೊಂದು ಉತ್ತಮ ಕಲಿಕಾ ಅನುಭವ ಎಂದು ಐಪಿಎಲ್ ಟೂರ್ನಿಯನ್ನು ಮ್ಯಾಕ್ಸ್‌ವೆಲ್ ಹೊಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.