ADVERTISEMENT

ಸನ್‌ರೈಸರ್ಸ್ ಕಡೆಗಣನೆ; ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿಯತ್ತ ಮುಖ ಮಾಡಿದ ವಾರ್ನರ್

ಪಿಟಿಐ
Published 28 ಅಕ್ಟೋಬರ್ 2021, 14:44 IST
Last Updated 28 ಅಕ್ಟೋಬರ್ 2021, 14:44 IST
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ತನ್ನನ್ನು ಉಳಿಸಿಕೊಳ್ಳುವ ಭರವಸೆಯನ್ನು ಕಳೆದುಕೊಂಡಿರುವ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಹರಾಜು ವೇದಿಕೆಗೆ ಮರಳಲು ನಿರ್ಧರಿಸಿದ್ದಾರೆ.

ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ತಂಡವು 2016ರ ಐಪಿಎಲ್‌ನಲ್ಲಿ ಟ್ರೋಫಿ ಗೆದ್ದಿತ್ತು. ಆದರೆ 2021ನೇ ಸಾಲಿನಲ್ಲಿ ಫ್ರಾಂಚೈಸಿಯು ಸಂಪೂರ್ಣವಾಗಿ ಕಡೆಗಣಿಸಿತ್ತು. ಅಲ್ಲದೆ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿತ್ತು. ಕೊನೆಯ ಆರು ಪಂದ್ಯಗಳಲ್ಲಿ ಕೂಡ ವಾರ್ನರ್ ಆಡಿರಲಿಲ್ಲ.

ಇದನ್ನೂ ಓದಿ:

'ನಾನು ನನ್ನ ಹೆಸರನ್ನು ಹರಾಜಿನಲ್ಲಿ ಇರಿಸುತ್ತೇನೆ. ಇತ್ತೀಚಿನ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಸಂಕೇತ ಗಮನಿಸಿದರೆ ಫ್ರಾಂಚೈಸಿಯು ನನ್ನನ್ನು ಉಳಿಸಿಕೊಳ್ಳುವುದಿಲ್ಲ. ಹಾಗಾಗಿ ನಾನು ಹೊಸ ಆರಂಭವನ್ನು ಎದುರು ನೋಡುತ್ತಿದ್ದೇನೆ' ಎಂದು 'ಎಸ್‌ಇಎನ್' ರೇಡಿಯೊಗೆ ವಾರ್ನರ್ ತಿಳಿಸಿದರು.

ADVERTISEMENT

ಸದ್ಯ ಯುಎಇನಲ್ಲಿರುವ ಡೇವಿಡ್ ವಾರ್ನರ್, ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.