ADVERTISEMENT

ಭಾರತ ವಿರುದ್ಧದ 2ನೇ ಟೆಸ್ಟ್‌ಗೂ ನ್ಯೂಜಿಲೆಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅಲಭ್ಯ

ಪಿಟಿಐ
Published 22 ಅಕ್ಟೋಬರ್ 2024, 4:11 IST
Last Updated 22 ಅಕ್ಟೋಬರ್ 2024, 4:11 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

(ರಾಯಿಟರ್ಸ್ ಚಿತ್ರ)

ಪುಣೆ: ನ್ಯೂಜಿಲೆಂಡ್‌ನ ಹಿರಿಯ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು ಭಾರತ ವಿರುದ್ಧ ಇಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಕ್ರಿಕೆಟ್ ಪಂದ್ಯಕ್ಕೂ ಲಭ್ಯವಿರುವುದಿಲ್ಲ. ಏಕೆಂದರೆ, ಗಾಯಗೊಂಡಿರುವ ಅವರು ಪುನಶ್ಚೇತನ ಕೇಂದ್ರದಲ್ಲಿದ್ದು, ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮಂಗಳವಾರ ತಿಳಿಸಿದೆ.

ADVERTISEMENT

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳಿಂದ ಜಯಿಸಿದ ನ್ಯೂಜಿಲೆಂಡ್‌, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭವಾಗಲಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿರುವ ವಿಲಿಯಮ್ಸನ್ ಇನ್ನೂ ಚೇತರಿಕೆ ಕಂಡಿಲ್ಲ.

ಗಾಯಗೊಂಡಿರುವ ವಿಲಿಯಮ್ಸನ್ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಅವರು ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂದು ಮುಖ್ಯ ಕೋಚ್‌ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.

'ನಾವು ನಿಕಟವಾಗಿ ಕೇನ್ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಶೇಕಡ 100ರಷ್ಟು ಫಿಟ್ ಆಗಿಲ್ಲ’ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬರುವ ದಿನಗಳಲ್ಲಿ ಅವರ ಫಿಟ್ನೆಸ್ ಮತ್ತಷ್ಟು ಸುಧಾರಣೆ ಕಂಡು, ಮೂರನೇ ಟೆಸ್ಟ್‌ಗೆ ಅವರು ಲಭ್ಯವಾಗುವ ಭರವಸೆ ಹೊಂದಿದ್ದೇವೆ ಎಂದು ತಿಳಿಸಿದೆ.

ಮೂರನೇ ಟೆಸ್ಟ್ ಪಂದ್ಯ ಮುಂಬೈನಲ್ಲಿ ನವೆಂಬರ್ 1ರಿಂದ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.