ADVERTISEMENT

ನೆಟ್ಸ್‌ನಲ್ಲಿ ಶಮಿ ಬೌಲಿಂಗ್ ಅಭ್ಯಾಸ

ಗಿರೀಶ ದೊಡ್ಡಮನಿ
Published 20 ಅಕ್ಟೋಬರ್ 2024, 23:32 IST
Last Updated 20 ಅಕ್ಟೋಬರ್ 2024, 23:32 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ಬೆಂಗಳೂರು: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯ ಪಿಚ್‌ನ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು. 

ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ನಂತರ ಅವರು ಅಭ್ಯಾಸ ಮಾಡಿದರು. 

ಟೆಸ್ಟ್ ಪಂದ್ಯದಲ್ಲಿ ಬೆಂಚ್‌ನಲ್ಲಿ ಕುಳಿತಿದ್ದ ಶುಭಮನ್ ಗಿಲ್, ಆಕಾಶ್ ದೀಪ್, ಪ್ರಸಿದ್ಧ ಕೃಷ್ಣ ಮತ್ತಿತರರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಗಾಯದಿಂದಾಗಿ ಗಿಲ್ ಅವರು ಈ ಪಂದ್ಯದಲ್ಲಿ ಆಡಿರಲಿಲ್ಲ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮಾರ್ಗದರ್ಶನ ನೀಡಿದರು. ಗಿಲ್ ಅವರು ಅಭ್ಯಾಸ ಮಾಡಿ ನಿರ್ಗಮಿಸುವಾಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಮುಖ್ಯ ಮೈದಾನಕ್ಕೆ ಶಮಿ ಬಂದರು. 

ADVERTISEMENT

ಗಿಲ್ ಅವರಿಗೆ ಬೌಲಿಂಗ್ ಮಾಡಲು ಆರಂಭಿಸಿದರು. ಕಪ್ಪುಬಣ್ಣದ ಟೀಶರ್ಟ್ ಮತ್ತು ಶಾರ್ಟ್ಸ್‌ ಧರಿಸಿದ್ದ ಅವರ ಎಡಗಾಲಿಗೆ ಪಟ್ಟಿ ಸುತ್ತಲಾಗಿತ್ತು. ಆರಂಭದಲ್ಲಿ ಶಾರ್ಟ್‌ ರನ್‌ ಅಪ್‌ ಬೌಲಿಂಗ್ ಮಾಡಿದರು. ಗಿಲ್ ಅವರು ಸ್ವಲ್ಪ ಹೊತ್ತಿನ ನಂತರ ಅಭ್ಯಾಸ ಮುಗಿಸಿ ನಿರ್ಗಮಿಸಿದರು. ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಪ್ಯಾಡ್, ಗ್ಲೌಸ್‌ ಧರಿಸಿ ಬ್ಯಾಟಿಂಗ್ ಆರಂಭಿಸಿದರು. ಅವರಿಗೆ ತಮ್ಮ ಎಂದಿನ ರನ್‌ ಅಪ್‌ನೊಂದಿಗೆ ಬೌಲಿಂಗ್ ಮಾಡಿದರು. 34 ವರ್ಷದ ಶಮಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಅಭ್ಯಾಸ ನಡೆಸಿದರು. 

ಕಾಲಿನ ಗಾಯದ ಶಸ್ತ್ರಚಿಕಿತ್ಸೆಯ ನಂತರ ಅವರು ಬೆಂಗಳೂರಿನ ಎನ್‌ಸಿಎನಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ಭಾಗದಲ್ಲಿ ಉರಿಯೂತ ಕಾಣಿಸಿಕೊಂಡಿದೆ ಎಂದು ರೋಹಿತ್ ಶರ್ಮಾ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.