ದಂಬುಲಾ: ಆರಂಭ ಆಟಗಾರ್ತಿ ಸಮ್ಜಾನಾ ಖಡಕಾ ಅವರ ಬಿರುಸಿನ ಅಜೇಯ ಅರ್ಧ ಶತಕದ ನೆರವಿನಿಂದ ನೇಪಾಳ ತಂಡ ಮಹಿಳೆಯರ ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಶುಕ್ರವಾರ ಯುಎಇ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿತು.
ಖಡಕಾ 45 ಎಸೆತಗಳಲ್ಲಿ ಔಟಾಗದೇ 71 ರನ್ ಹೊಡೆದರು. ಈ ಇನಿಂಗ್ಸ್‌ನಲ್ಲಿ 11 ಬೌಂಡರಿಗಳಿದ್ದವು.
ಮೊದಲು ಆಡಿದ ಯುಎಇ ತಂಡ 20 ಓವರುಗಳಲ್ಲಿ 8 ವಿಕೆಟ್‌ಗೆ 115 ರನ್ ಗಳಿಸಿತು. ಖುಷಿ ಶರ್ಮಾ 39 ಎಸೆತಗಳಲ್ಲಿ 36 ರನ್ ಗಳಿಸಿದ್ದೇ ಅತ್ಯಧಿಕ. ನೇಪಾಳ ಕಡೆ ಮಧ್ಯಮ ವೇಗಿ ಇಂದು ಬರ್ಮಾ 15 ರನ್ನಿಗೆ 3 ವಿಕೆಟ್ ಪಡೆದು ಯಶಸ್ವಿ ಎನಿಸಿದರು. ನೇಪಾಳ 23 ಎಸೆತಗಳಿರುವಂತೆ 4 ವಿಕೆಟ್‌ಗೆ 118 ರನ್ ಹೊಡೆಯಿತು.
ಸ್ಕೋರುಗಳು: ಯುಎಇ: 20 ಓವರುಗಳಲ್ಲಿ 8 ವಿಕೆಟ್‌ಗೆ 115 (ಖುಷಿ ಶರ್ಮಾ 36, ಕವಿಶಾ ಕುಮಾರಿ 22; ಇಂದು ಬರ್ಮಾ 19ಕ್ಕೆ3); ನೇಪಾಳ: 16.1 ಓವರುಗಳಲ್ಲಿ 4 ವಿಕೆಟ್‌ಗೆ 118 (ಸಮ್ಜಾನಾ ಖಡಕಾ ಔಟಾಗದೇ 72; ಕವಿಶಾ ಕುಮಾರಿ 12ಕ್ಕೆ3). ಪಂದ್ಯದ ಆಟಗಾರ್ತಿ: ಸಮ್ಜಾನಾ ಖಡಕಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.