ಬೆಂಗಳೂರು: ಎಂ.ಅನಘಾ (8ಕ್ಕೆ3) ಮತ್ತು ಸಿಮ್ರನ್ ಹೆನ್ರಿ (10ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಬೆಳಗಾವಿ ಪ್ಯಾಂಥರ್ಸ್ ತಂಡವು ಮಹಿಳಾ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 34ರನ್‌ಗಳಿಂದ ಶಿವಮೊಗ್ಗ ಲಯನ್ಸ್ ಎದುರು ಗೆದ್ದಿತು. ಈ ಮೂಲಕ ಫೈನಲ್‌ಗೂ ಲಗ್ಗೆ ಇಟ್ಟಿತು.
ಐಎಎಫ್ ಮೈದಾನದಲ್ಲಿ ಶನಿವಾರ ಮೊದಲು ಬ್ಯಾಟ್ ಮಾಡಿದ ಬೆಳಗಾವಿ ತಂಡ ಕರುಣಾ ಜೈನ್ (34; 42ಎ, 1ಬೌಂ) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 93ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ 17.3 ಓವರ್‌ಗಳಲ್ಲಿ 59ರನ್‌ಗಳಿಗೆ ಆಲೌಟ್ ಆಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಫೈನಲ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಬಳ್ಳಾರಿ ಟಸ್ಕರ್ಸ್ ಸವಾಲು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್: ಬೆಳಗಾವಿ ಪ್ಯಾಂಥರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 93 (ಕರುಣಾ ಜೈನ್ 34, ಸಿಮ್ರನ್ ಹೆನ್ರಿ ಔಟಾಗದೆ 16; ಆಕಾಂಕ್ಷ ಕೊಹ್ಲಿ 15ಕ್ಕೆ2, ರಾಮೇಶ್ವರಿ ಗಾಯಕವಾಡ್ 24ಕ್ಕೆ2).
ಶಿವಮೊಗ್ಗ ಲಯನ್ಸ್: 17.3 ಓವರ್‌ಗಳಲ್ಲಿ 59 (ಎಂ.ಸೌಮ್ಯಾ 21; ಅದಿತಿ ರಾಜೇಶ್ 12ಕ್ಕೆ2, ಮೋನಿಕಾ ಸಿ.ಪಟೇಲ್ 18ಕ್ಕೆ2, ಎಂ.ಅನಘಾ 8ಕ್ಕೆ3, ಸಿಮ್ರನ್ ಹೆನ್ರಿ 10ಕ್ಕೆ2). ಫಲಿತಾಂಶ: ಬೆಳಗಾವಿ ಪ್ಯಾಂಥರ್ಸ್‌ಗೆ 34ರನ್ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.