ಚೆಸ್ಟರ್ ಲೀ ಸ್ಟ್ರೀಟ್: ಸಾರಾ ಗ್ಲೆನ್ (23ಕ್ಕೆ4) ಸ್ಪಿನ್ ದಾಳಿಯ ಮುಂದೆ ಭಾರತ ತಂಡವು ಸೋಲಿನ ಕಹಿಯುಂಡಿತು.
ರಿವರ್ಸ್‌ಸೈಡ್ ಮೈದಾನದಲ್ಲಿ ಭಾನುವಾರ ನಡೆದ ಮಹಿಳೆಯರ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 9 ವಿಕೆಟ್‌ಗಳಿಗೆ ಭಾರತದ ಎದುರು ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂದಾನ (23; 20ಎ) ಹಾಗೂ ಶಫಾಲಿ ವರ್ಮಾ (14; 13ಎ) ದೊಡ್ಡ ಮೊತ್ತದ ಆರಂಭ ನೀಡಲಿಲ್ಲ. ಆದರೆ, ಸಾರಾ ಗ್ಲೆನ್ ಕೊಟ್ಟ ಪೆಟ್ಟಿಗೆ ಅಗ್ರಕ್ರಮಾಂಕ ಹಾಗೂ ಮಧ್ಯಮ ಕ್ರಮಾಕದ ಬ್ಯಾಟರ್‌ಗಳು ಕುಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 132 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.
ಅದಕ್ಕುತ್ತರವಾಗಿ ಆತಿಥೇಯ ತಂಡವು 13 ಓವರ್‌ಗಳಲ್ಲಿ 1 ವಿಕೆಟ್‌ಗೆ 134 ರನ್ ಗಳಿಸಿತು. ಸೋಫಿಯಾ ಡಂಕ್ಲಿ (ಔಟಾಗದೆ 61; 44ಎ, 4X8, 6X1) ಹಾಗೂ ಅಲೈಸ್ ಕ್ಯಾಪ್ಸಿ (ಔಟಾಗದೆ 32;20ಎ,4X3, 6X2) ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 7ಕ್ಕೆ 132 (ಸ್ಮೃತಿ ಮಂದಾನ 23, ಹರ್ಮನ್‌ಪ್ರೀತ್ ಕೌರ್ 20, ದೀಪ್ತಿ ಶರ್ಮಾ ಔಟಾಗದೆ 29, ಸಾರಾ ಗ್ಲೆನ್ 23ಕ್ಕೆ4), ಇಂಗ್ಲೆಂಡ್: 13 ಓವರ್‌ಗಳಲ್ಲಿ 1 ವಿಕೆಟ್‌ಗೆ 134 (ಸೋಫಿಯಾ ಡಂಕ್ಲಿ ಔಟಾಗದೆ 61, ಡೇನಿಲ್ ವೈಟ್ 24, ಅಲೈಸ್ ಕ್ಯಾಪ್ಸಿ ಔಟಾಗದೆ 32, ಸ್ನೇಹಾ ರಾಣಾ 31ಕ್ಕೆ1) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 9 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.