Women's T20 World Cup: ಆಸ್ಟ್ರೇಲಿಯಾ ಶುಭಾರಂಭ
ಪ್ರಜಾವಾಣಿ ವಾರ್ತೆ Published 5 ಅಕ್ಟೋಬರ್ 2024, 23:25 IST Last Updated 5 ಅಕ್ಟೋಬರ್ 2024, 23:25 IST ಬೆತ್ ಮೂನಿ
ಶಾರ್ಜಾ (ಪಿಟಿಐ): ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ತಂಡವು ಟಿ20 ಕ್ರಿಕೆಟ್ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಶನಿವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 6 ವಿಕೆಟ್ಗಳಿಂದ ಶ್ರೀಲಂಕಾ ಎದುರು ಜಯಿಸಿತು. ಆದರೆ ಲಂಕಾ ತಂಡಕ್ಕೆ ಇದು ಸತತ ಎರಡನೇ ಸೋಲು.
ಸಂಕ್ಷಿಪ್ತ ಸ್ಕೋರು:
ಶ್ರೀಲಂಕಾ: 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 93 (ಹರ್ಷಿತಾ ಮಾಧವಿ 23, ನೀಲಾಕ್ಷಿ ಡಿ ಸಿಲ್ವಾ ಔಟಾಗದೆ 29, ಅನೂಷ್ಕಾ ಸಂಜೀವನಿ 16, ಮೆಗನ್ ಶುಟ್ 12ಕ್ಕೆ3, ಮಾಲಿನೆ 20ಕ್ಕೆ2) ಆಸ್ಟ್ರೇಲಿಯಾ: 14.2 ಓವರ್ಗಳಲ್ಲಿ 4ಕ್ಕೆ94 (ಬೆತ್ ಮೂನಿ ಔಟಾಗದೆ 43, ಎಲಿಸ್ ಪೆರಿ 17, ಉದೇಶಿಕಾ ಪ್ರಭೋದಿನಿ 19ಕ್ಕೆ1, ಇನೊಕಾ ರಣವೀರಾ 20ಕ್ಕೆ1) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್ಗಳ ಜಯ.
ಇಂಗ್ಲೆಂಡ್ಗೆ ಮಣಿದ ಬಾಂಗ್ಲಾದೇಶ
ಶಾರ್ಜಾ (ಪಿಟಿಐ): ಡ್ಯಾನಿ ವ್ಯಾಟ್ ಹಾಜ್ (41;40ಎ) ಅವರ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು ಶನಿವಾರ ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 21 ರನ್ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲ ಪಡೆ 20 ಓವರ್ಗಳಲ್ಲಿ 7 ವಿಕೆಟ್ಗೆ 118 ರನ್ ಗಳಿಸಿತು. ಡ್ಯಾನಿ ಮತ್ತು ಮೈಯಾ ಬೌಷಿಯರ್ (23) ಮೊದಲ ವಿಕೆಟ್ಗೆ 48 ರನ್ ಸೇರಿಸಿದ್ದರು. ಆದರೆ, ನಂತರ ಬಂದವರು ನಿರಾಸೆ ಮೂಡಿಸಿದರು. ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶವು ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 97 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಶೋಭನಾ ಮೊಸ್ತರಿ (44;48ಎ) ಏಕಾಂಗಿ ಹೋರಾಟ ನಡೆಸಿದರೂ ಗೆಲುವಿಗೆ ಸಾಕಾಗಲಿಲ್ಲ. ಟೂರ್ನಿಯಲ್ಲಿ ಇಂಗ್ಲೆಂಡ್ಗೆ ಮೊದಲ ಗೆಲುವಾದರೆ, ಬಾಂಗ್ಲಾ ತಂಡಕ್ಕೆ ಸತತ ಎರಡನೇ ಸೋಲಾಗಿದೆ. ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 20 ಓವರ್ಗಳಲ್ಲಿ 7ಕ್ಕೆ 118 (ಮೈಯಾ ಬೌಷಿಯರ್ 23, ಡ್ಯಾನಿ ವ್ಯಾಟ್ ಹಾಜ್ 41; ನಹೀದಾ ಅಕ್ತರ್ 32ಕ್ಕೆ 2, ಫಾಹಿಮಾ ಖಾತುನ್ 18ಕ್ಕೆ 2, ರಿತು ಮೋನಿ 24ಕ್ಕೆ 2). ಬಾಂಗ್ಲಾದೇಶ: 20 ಓವರ್ಗಳಲ್ಲಿ 7ಕ್ಕೆ 97 (ಶೋಭನಾ ಮೊಸ್ತರಿ 44; ಲಿನ್ಸೆ ಸ್ಮಿತ್ 11ಕ್ಕೆ 2, ಚಾರ್ಲಿ ಡೀನ್ 22ಕ್ಕೆ 2). ಫಲಿತಾಂಶ: ಇಂಗ್ಲೆಂಡ್ಗೆ 21 ರನ್ಗಳ ಜಯ.