ADVERTISEMENT

Women's T20 WC | ಸೆಮಿಫೈನಲ್‌ಗೆ ವೆಸ್ಟ್‌ ಇಂಡೀಸ್‌

ಪಿಟಿಐ
Published 15 ಅಕ್ಟೋಬರ್ 2024, 16:13 IST
Last Updated 15 ಅಕ್ಟೋಬರ್ 2024, 16:13 IST
<div class="paragraphs"><p>ಕಿಯಾನಾ ಜೋಸೆಫ್ </p><p></p></div>

ಕಿಯಾನಾ ಜೋಸೆಫ್

   

ಎಕ್ಸ್‌ ಚಿತ್ರ

ADVERTISEMENT

ದುಬೈ: ನಾಯಕಿ ಹೆಯಲಿ ಮ್ಯಾಥ್ಯೂಸ್ (50;38ಎ) ಮತ್ತು ಕಿಯಾನಾ ಜೋಸೆಫ್ (52;38ಎ) ಅವರಿಬ್ಬರ ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡವು ಮಂಗಳವಾರ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿ, ಸೆಮಿಫೈನಲ್‌ಗೆ ಲಗ್ಗೆ ಹಾಕಿತು.

ಈ ನಿರ್ಣಾಯಕ ಪಂದ್ಯದಲ್ಲಿ 142 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ವೆಸ್ಟ್‌ಇಂಡೀಸ್‌ ತಂಡಕ್ಕೆ ಹೆಯಲಿ ಮತ್ತು ಕಿಯಾನಾ ಮೊದಲ ವಿಕೆಟ್‌ಗೆ 102 ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ನಂತರ ಬಂದ ಡಿಯಾಂಡ್ರಾ ಡಾಟಿನ್ (27;19) ಉಪಯುಕ್ತ ಕಾಣಿಕೆ ನೀಡಿದರು. ಹೀಗಾಗಿ, ತಂಡವು ಇನ್ನೂ 12 ಎಸೆತ ಬಾಕಿ ಇರುವಂತೆ 4 ವಿಕೆಟ್‌ಗೆ 144 ರನ್‌ ಗಳಿಸಿತು.

‘ಬಿ’ ಗುಂಪಿನಲ್ಲಿದ್ದ ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ತಂಡಗಳು ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ತಲಾ 6 ಅಂಕ ಸಂಪಾದಿಸಿವೆ. ಆದರೆ, ನೆಟ್‌ ರನ್‌ರೇಟ್‌ ಆಧಾರದಲ್ಲಿ ವಿಂಡೀಸ್‌ (1.536) ಮತ್ತು ದಕ್ಷಿಣ ಆಫ್ರಿಕಾ (1.382) ತಂಡಗಳು ನಾಲ್ಕರ ಘಟ್ಟಕ್ಕೆ ಮುನ್ನಡೆದರೆ, ಇಂಗ್ಲೆಂಡ್‌ (1.091) ಹೊರಬಿತ್ತು.

ಇದಕ್ಕೂ ಮೊದಲು ನಥಾಲಿ ಶಿವರ್ ಬ್ರಂಟ್ (ಔಟಾಗದೆ 57; 50ಎಸೆತ, 4X7) ಅವರ ಅರ್ಧಶತಕ ಬಲದಿಂದ 20 ಓವರ್‌ಗಳಲ್ಲಿ  7 ವಿಕೆಟ್‌ಗಳಿಗೆ 141 ರನ್ ಗಳಿಸಿತು. ವಿಂಡೀಸ್ ತಂಡದ ಎಫೈ ಫ್ಲೆಚರ್ ಮತ್ತು ಹೆಯಲಿ ಮ್ಯಾಥ್ಯೂಸ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 20 ಓವರ್‌ಗಳಲ್ಲಿ 7ಕ್ಕೆ141 (ನಥಾಲಿ ಶಿವರ್ ಬ್ರಂಟ್ ಔಟಾಗದೆ 57, ಹೀಥರ್ ನೈಟ್ 21, ಹೆಯಲಿ ಮ್ಯಾಥ್ಯೂಸ್ 35ಕ್ಕೆ2, ಎಫೈ ಫ್ಲೆಚರ್ 21ಕ್ಕೆ3) ವೆಸ್ಟ್ ಇಂಡೀಸ್: 18 ಓವರ್‌ಗಳಲ್ಲಿ 4ಕ್ಕೆ 144 (ಹೆಯಲಿ ಮ್ಯಾಥ್ಯೂಸ್ 50 ಮತ್ತು ಕಿಯಾನಾ ಜೋಸೆಫ್ 52, ಡಿಯಾಂಡ್ರಾ ಡಾಟಿನ್ 27). ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 6 ವಿಕೆಟ್‌ ಜಯ, ಪಂದ್ಯದ ಆಟಗಾರ್ತಿ: ಕಿಯಾನಾ ಜೋಸೆಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.