ಮೆಲ್ಬೋರ್ನ್: ಜಂಕ್ಷನ್ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮಹಿಳಾ ಟಿ20ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 133 ರನ್‌ಗಳನ್ನು ಕಲೆ ಹಾಕಿದೆ.
ಆರಂಭಿಕ ಆಟಗಾರ್ತಿ ಶಫಾಲಿ 34 ಬಾಲ್‌ಗಳಿಂದ 46 ರನ್ ಸಿಡಿಸಿದರೆ, ತಾನಿಯಾ ಬಾಟ್ಯಾ 25 ಬಾಲ್‌ಗಳಿಂದ 23 ಗಳಿಸಿದರು. ರಾಧಾ ಯಾದವ್ ಅವರು 9 ಬಾಲ್‌ಗಳಿಂದ 14 ರನ್ ಸಿಡಿಸಿ ತಂಡದ ಮೊತ್ತಕ್ಕೆ ಅಲ್ಪ ಕಾಣಿಕೆ ನೀಡಿದರು.
ಇನ್ನು ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ಪರ ರೋಸ್‌ಮೇರಿ ಮೇರ್ 27 ರನ್ ನೀಡಿ 2 ವಿಕೆಟ್ ಪಡೆದರೆ, ಅಮೇಲಿಯಾ ಕೇರ್ 21 ರನ್ ನೀಡಿ 2 ವಿಕಟ್ ಪಡೆದರು.
ಭಾರತ ನೀಡಿದ 133 ರನ್‌ಗಳ ಸಾಧಾರಣ ಮೊತ್ತ ಬೆನ್ನು ಹತ್ತಿರುವ ನ್ಯೂಜಿಲೆಂಡ್ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿ ಆಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.