ಶಾರ್ಜಾ : ಆಫ್ ಸ್ಪಿನ್ನರ್ ಎಡೆನ್ ಕಾರ್ಸನ್ (29ಕ್ಕೆ3) ಅವರ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ತಂಡ, ಕುತೂಹಲಕರವಾಗಿದ್ದ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಶುಕ್ರವಾರ ವೆಸ್ಟ್ ಇಂಡೀಸ್ ತಂಡವನ್ನು ಎಂಟು ರನ್‌ಗಳಿಂದ ಸೋಲಿಸಿ ಫೈನಲ್ ತಲುಪಿತು.
ನ್ಯೂಜಿಲೆಂಡ್ ತಂಡ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಮಧ್ಯಮ ವೇಗಿ ಡಿಯೆಂಡ್ರಾ ಡಾಟಿನ್ (22ಕ್ಕೆ4 ಮತ್ತು 22 ಎಸೆತಗಳಲ್ಲಿ 33) ಅವರ ಆಲ್‌ರೌಂಡ್ ಆಟ ವೆಸ್ಟ್ ಇಂಡೀಸ್ ಗೆಲುವಿಗೆ ಸಾಲಲಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 9 ವಿಕೆಟ್‌ಗೆ 128 ರನ್ ಗಳಿಸಿತು. ಸೂಝಿ ಬೇಟ್ಸ್ (26) ಮತ್ತು ಜಾರ್ಜಿಯಾ ಪ್ಲಿಮ್ಮರ್ (33, 31ಎಸೆತ) ಮೊದಲ ವಿಕೆಟ್‌ಗೆ 48 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಒಂದು ಹಂತದಲ್ಲಿ 14.3 ಓವರುಗಳಲ್ಲಿ 3 ವಿಕೆಟ್‌ಗೆ 96 ರನ್ ಗಳಿಸಿದ್ದ ಕಿವೀಸ್ ತಂಡ ನಂತರ ಡಿಯೆಂಡ್ರಾ ದಾಳಿಗೆ ಕುಸಿದು 104 ರನ್ ಗಳಾಗುಷ್ಟರಲ್ಲಿ ಏಳು ವಿಕೆಟ್ ಕಳೆದು
ಕೊಂಡಿತು.
ಸ್ಕೋರುಗಳು: ನ್ಯೂಜಿಲೆಂಡ್: 20 ಓವರುಗಳಲ್ಲಿ 9 ವಿಕೆಟ್ 128 (ಸೂಝಿ ಬೇಟ್ಸ್ 26, ಜಾರ್ಜಿಯಾ ಪ್ಲಿಮ್ಮರ್ 33, ಇಸಬೆಲ್ಲಾ ಗೇಝ್ ಔಟಾಗದೇ 20; ಆಫಿ ಫ್ಲೆಚರ್ 23ಕ್ಕೆ2, ಡಿಯೆಂಡ್ರಾ ಡಾಟಿನ್ 22ಕ್ಕೆ4); ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 8 ವಿಕೆಟ್‌ಗೆ 120 (ಡಿಯೆಂಡ್ರಾ ಡಾಟಿನ್ 33; ಎಡೆನ್ ಕಾರ್ಸನ್ 29ಕ್ಕೆ3, ಅಮೇಲಿಯಾ ಕೆರ್ 14ಕ್ಕೆ2). ಪಂದ್ಯದ ಆಟಗಾರ್ತಿ: ಎಡೆನ್ ಕಾರ್ಸನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.