ADVERTISEMENT

ವಿಶ್ವಕಪ್‌ ಕ್ರಿಕೆಟ್‌: ಸಿಕ್ಸರ್‌ಗಳ ಸರದಾರ ಕ್ರಿಸ್‌ ಗೇಲ್‌

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 14:49 IST
Last Updated 13 ಜೂನ್ 2019, 14:49 IST
   

ನಾಟಿಂಗಂ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ವಿಶ್ವಕಪ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿಕ್ಸರ್‌ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

2019ರ ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿತು.ಟ್ರೆಂಟ್‌ ಬಿಜ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೇಲ್‌ಬಿರುಸು ಬ್ಯಾಟಿಂಗ್‌ ಮೂಲಕ ತಂಡವನ್ನು ಬಹುಬೇಗ ಜಯದ ದಡ ಸೇರಿಸಲು ನೆರವಾಗುವಜತೆಗೆ ಸಿಕ್ಸರ್‌ಗಳ ಸರದಾರ ಎನಿಸಿಕೊಂಡರು.

ನಾಲ್ಕನೇ ಓವರ್‌ನಲ್ಲಿ ಹಸನ್ ಅಲಿ ಎಸೆತವನ್ನು ಮುಗಿಲಿನ ಕಡೆಗೆ ತಿರುಗಿಸಿದ ಗೇಲ್‌, ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್‌ ದಾಖಲಿಸಿದರು. ಬಳಿಕ 10ನೇ ಓವರ್‌ನಲ್ಲಿವಹಾಬ್ ರಿಯಾಜ್ ಎಸೆತವನ್ನು ನೇರವಾಗಿ ಬೌಂಡರಿ ಗಡಿ ದಾಟಿಸುವ ಮೂಲಕ ವಿಶ್ವಕಪ್‌ ಪಂದ್ಯಗಳಲ್ಲಿ 40ನೇ ಸಿಕ್ಸರ್‌ ಗೇಲ್‌ಖಾತೆಗೆ ಸೇರಿತು.

ADVERTISEMENT

ತಂಡದ ಮೊತ್ತ 77 ರನ್‌ ಗಳಿಸಿದ್ದಾಗ ಅರ್ಧ ಶತಕ ಗಳಿಸಿದ್ದ ಗೇಲ್‌ ವಿಕೆಟ್ ಒಪ್ಪಿಸಿದರು.

ಈ ಪಂದ್ಯಕ್ಕೂ ಮುನ್ನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆಯನ್ನು ಎಬಿ ಡಿ ವಿಲಿಯರ್ಸ್ ಜತೆ ಹಂಚಿಕೊಂಡಿದ್ದ ಗೇಲ್‌, ಇಂದಿನ ಮೂರು ಸಿಕ್ಸರ್‌ಗಳ ಮೂಲಕ ಅತಿ ಹೆಚ್ಚು ಸಿಕ್ಸರ್ ದಾಖಲಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಬ್ಬರೂ ಆಟಗಾರರು 37 ಸಿಕ್ಸರ್‌ ದಾಖಲಿಸಿದ್ದರು. ಇದೀಗ ಗೇಲ್‌ 40 ಸಿಕ್ಸರ್‌ಗಳನ್ನು ಖಾತೆಯಲ್ಲಿ ಪೇರಿಸಿಕೊಂಡಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದವರು

* ಕ್ರಿಸ್‌ ಗೇಲ್‌ – 40

*ಎಬಿ ಡಿ ವಿಲಿಯರ್ಸ್– 37

* ರಿಕಿ ಪಾಂಟಿಂಗ್‌– 31

* ಬ್ರೆಂಡನ್‌ ಮೆಕ್ಲಂ– 29

* ಹರ್ಷಲ್‌ ಗಿಬ್ಸ್‌– 28

* ಸಚಿನ್‌ ತೆಂಡೂಲ್ಕರ್‌ ಮತ್ತು ಸನತ್‌ ಜಯಸೂರ್ಯ– 27

* ಸೌರವ್‌ ಗಂಗೂಲಿ– 25‌

* ಮ್ಯಾಥ್ಯು ಹೇಡನ್‌– 23

* ವಿವಿಯನ್‌ ರಿಚರ್ಡ್– 22

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.