ADVERTISEMENT

ವಿಶ್ವಕಪ್‌ನಲ್ಲಿ ಆಡಬಯಸಿದ್ದ ಡಿವಿಲಿಯರ್ಸ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 18:37 IST
Last Updated 7 ಜೂನ್ 2019, 18:37 IST
   

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕ ತಂಡದ ಸ್ಟಾರ್‌ ಆಟಗಾರರಾಗಿದ್ದ ಎ ಬಿ ಡಿ’ವಿಲಿಯರ್ಸ್‌ ನಿವೃತ್ತಿಯಿಂದ ಹೊರಬರಲು ಬಯಸಿದ್ದರು. ಆದರೆ ಕ್ರಿಕೆಟ್‌ ದಕ್ಷಿಣ ಆಫ್ರಿಕ (ಸಿಎಸ್‌ಎ) ಅವರ ಕೊಡುಗೆಯನ್ನು ತಳ್ಳಿಹಾಕಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

‘ಇಎಸ್‌ಪಿಎನ್‌ ಕ್ರಿಕ್‌ಇನ್ಫೊ’ ಪ್ರಕಾರ ಕಳೆದ ತಿಂಗಳು ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲು 24 ಗಂಟೆಗಳಿರುವಾಗ ಡಿ’ವಿಲಿಯರ್ಸ್‌ ಸಿಎಸ್‌ಎಗೆ ಈ ವಿಷಯ ತಿಳಿಸಿದ್ದರು. ಆದರೆ, ಕಳೆದ ವರ್ಷ ನಿವೃತ್ತಿ ಬೇಡವೆಂದರೂ ಆ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಸಿಎಸ್‌ಎ ಅವರ ಮನದ ಇಂಗಿತಕ್ಕೆ ಬೆಲೆಕೊಡಲಿಲ್ಲ.

ವಿಶ್ವಕಪ್‌ನಲ್ಲಿ ಆರಂಭದ ಮೂರು ಪಂದ್ಯಗಳನ್ನು ಸೋತು ಸುಣ್ಣವಾಗಿರುವ ದಕ್ಷಿಣ ಆಫ್ರಿಕದ ನಿರ್ವಹಣೆ ವಿರುದ್ಧ ಆ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.