ADVERTISEMENT

ಕ್ರಿಕೆಟ್ ಕಾಶಿಯಲ್ಲಿ ಗೆದ್ದ 'ಕ್ರಿಕೆಟ್'; ಇಂಗ್ಲೆಂಡ್ ಮಡಿಲಿಗೆ ಮೊದಲ ವಿಶ್ವಕಪ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 20:12 IST
Last Updated 14 ಜುಲೈ 2019, 20:12 IST
   

ಲಂಡನ್‌: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ವಿಶ್ವಕಪ್‌ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ತಂಡದ ಓಟಕ್ಕೆ ಲಗಾಮು ಹಾಕಿದ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್‌ಗೆ ಮುತ್ತಿಟ್ಟಿದೆ.

ನ್ಯೂಜಿಲೆಂಡ್‌ ನೀಡಿದ 242 ರನ್‌ ಗುರಿಯ ಬೆನ್ನೇರಿದ ಅತಿಥೇಯ ತಂಡ 241 ರನ್‌ಗಳಿಗೆ ಆಲ್‌ ಔಟ್‌ ಆಯಿತು. ಆಗ ಎದುರಾದ ಸೂಪರ್‌ ಓವರ್‌ಗೂ ಜಗ್ಗದೆ ವಿಶ್ವಾಸದಿಂದಲೇ ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕೆ ಇಳಿದ ಇಂಗ್ಲೆಂಡ್ ಜಯಬೇರಿ ಬಾರಿಸಿಯೇ ಬಿಟ್ಟಿತು.

ಸೂಪರ್‌ ಓವರ್‌ ಘಟ್ಟ ತಲುಪಿದ ಮೊದಲ ವಿಶ್ವಕಪ್‌ ಪಂದ್ಯ

ADVERTISEMENT

ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್ ತಂಡಗಳು ಸಮಬಲ ಸಾಧಿಸಿದ ಪರಿಣಾಮ ಸೂಪರ್ ಓವರ್ ನೀಡಲಾಗಿದೆ.ಅನೇಕ ಮೊದಲುಗಳಿಗೆ ಈ ವಿಶ್ವಕಪ್‌ ಸಾಕ್ಷಿಯಾಗಿದೆ. ಅದರಲ್ಲಿ ಸೂಪರ್‌ ಓವರ್‌ ಘಟ್ಟ ತಲುಪಿರುವುದು ಸಹ ಒಂದು.ನ್ಯೂಜಿಲೆಂಡ್‌ ನೀಡಿದ 242 ರನ್‌ಗುರಿಯ ಬೆನ್ನೇರಿದಅತಿಥೇಯ ತಂಡ 241 ರನ್‌ಗಳಿಗೆ ಆಲ್‌ ಔಟ್‌ ಆಗಿದೆ.

ಯಾಕಾಗಿ ಸೂಪರ್ ಓವರ್?



ಎರಡೂ ತಂಡಗಳು ಸಮ ಸ್ಕೋರ್‌ ಗಳಿಸಿದಾಗ ಫಲಿತಾಂಶ ನಿರ್ಧರಿಸಲು ‘ಸೂಪರ್‌ ಓವರ್‌’ ಮೊರೆ ಹೋಗಲಾಗುತ್ತದೆ. ಉಭಯ ತಂಡಗಳು ತಲಾ ಒಂದು ಓವರ್‌ ಆಡುತ್ತವೆ. ಎರಡಕ್ಕಿಂತಲೂ ಹೆಚ್ಚು ವಿಕೆಟ್‌ ಕಳೆದುಕೊಂಡರೆ ಆ ತಂಡ ಆಲೌಟ್‌ ಆದಂತೆ.

ಕ್ಷಣಕ್ಷಣದ ಸ್ಕೋರ್‌:https://bit.ly/2JJUFtu

ಆರಂಭಿಕರಾದ ಜೇಸನ್‌ ರಾಯ್‌ ಮತ್ತು ಜಾನಿ ಬೆಸ್ಟೊ ಉತ್ತಮ ಆಟ ಆಡುವ ನಿರೀಕ್ಷೆ ಮೂಡಿಸಿದರಾದರೂ, ಮ್ಯಾಟ್‌ ಹೆನ್ರಿ ಎಸೆತದಲ್ಲಿ ರಾಯ್‌ ಆಟ ಕೊನೆಯಾಯಿತು. ಐದನೇ ಓವರ್‌ನಲ್ಲಿ ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್ ಸಹ ಆರಂಭಿಕ ಆಘಾತಕ್ಕೆ ಒಳಗಾಯಿತು.

ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಹಾಗೂ ಗೆಲುವಿನ ಒತ್ತಡದಲ್ಲಿಯೂ ಇರುವ ಇಂಗ್ಲೆಂಡ್‌ ತಂಡದ ಆರಂಭಿಕ ವಿಕೆಟ್‌ಗಳು ಬಹುಬೇಗ ಉರುಳಿರುವುದು ತಂಡವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. 37 ರನ್‌ ಗಳಿಸಿದ್ದ ಬೆಸ್ಟೊಗೆ ಲಾಕಿ ಫರ್ಗೂಸನ್‌ ಕಡಿವಾಣ ಹಾಕಿದರು.

ತಾಳ್ಮೆಯ ಆಟಕ್ಕೆ ಮುಂದಾದ ಜೋ ರೂಟ್‌ 30 ಎಸೆತಗಳಲ್ಲಿ 7 ರನ್‌ ಗಳಿಸಿದರು. ಗ್ರಾಂಡ್‌ಹೋಮ್‌ ತಾಳ್ಮೆಯ ಆಟವನ್ನು ಕೊನೆಯಾಗಿಸಿದರು. ನಾಯಕ ಇಯಾನ್‌ ಮಾರ್ಗನ್ ಸಹ ನಿರೀಕ್ಷೆ ಹುಸಿಗೊಳಿಸಿದರು. 22 ಎಸೆತಗಳಲ್ಲಿ 9 ರನ್‌ ಗಳಿಸಿದ್ದ ಅವರು ಜಿಮ್ಮಿ ನೀಶಮ್‌ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಅಲ್ಲಿಗೆ ಇಂಗ್ಲೆಂಡ್‌ನ ಪ್ರಮುಖ ನಾಲ್ಕು ವಿಕೆಟ್‌ಗಳು ಉರುಳಿ, ಗೆಲವು ದೂರವಾಗುವ ಸ್ಥಿತಿ ನಿರ್ಮಾಣವಾಗಿದೆ.

ಮ್ಯಾಟ್‌ ಹೆನ್ರಿ, ಗ್ರಾಂಡ್‌ಹೋಮ್‌, ಲಾಕಿ ಫರ್ಗೂಸನ್‌ ಹಾಗೂ ಜಿಮ್ಮಿ ನೀಶಮ್‌ ತಲಾ 1 ವಿಕೆಟ್‌ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.