ಲಂಡನ್: ದ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟಿಂಗ್ ನಡೆಸಿ ಟೀಂ ಇಂಡಿಯಾ ಕಾಂಗರೂಗಳ ಗೆಲುವಿಗೆ 353 ರನ್ ಗುರಿ ನೀಡಿತು. ಭಾರತದ ಸವಾಲಿನ ಮೊತ್ತ ಎದುರಿಸಿದಆಸ್ಟ್ರೇಲಿಯಾ ಮೊದಲಿಗೆತಾಳ್ಮೆಯ ಆಟ, ನಂತರದಲ್ಲಿ ಬಿರುಸಿನ ಹೊಡೆತಗಳಿಗೆ ಮುಂದಾದರೂ ಗೆಲುವು ಸಿಗಲಿಲ್ಲ. ಭಾರತ 36 ರನ್ ಗಳಿಂದ ಜಯ ಸಾಧಿಸಿತು.
ನಿಗದಿತ 50 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಎಲ್ಲವಿಕೆಟ್ ಕಳೆದುಕೊಂಡು 316ರನ್ ಗಳಿಸಲಷ್ಟೇ ಶಕ್ತವಾಯಿತು.ಭುವನೇಶ್ವರ್ ಮತ್ತುಬೂಮ್ರಾ ತಲಾ 3 ವಿಕೆಟ್ ಹಾಗೂ ಯಜುವೇಂದ್ರ ಚಾಹನ್‌ಎರಡು ವಿಕೆಟ್ ಕಬಳಿಸಿದರು.
ವೇಗದ ಬೌಲರ್‌ಗಳು ಕಾಂಗರೂ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿಯುವುದನ್ನು ತಡೆದರಾದರೂ ಆರಂಭದಲ್ಲಿಯೇ ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ. ಪವರ್ ಪ್ಲೇ ಇದ್ದಂತೆಯೇ ಕೊಹ್ಲಿ ಬೌಲಿಂಗ್‌ನಲ್ಲಿ ಪ್ರಯೋಗಕ್ಕೆ ಮುಂದಾದರು. ಮೊದಲಿಗೆ ಪಾಂಡ್ಯ ನಂತರ ಕುಲದೀಪ್ ಯಾದವ್ ಬೌಲಿಂಗ್ ಪ್ರದರ್ಶಿಸಿದರು.
36 ರನ್ ಗಳಿಸಿದ್ದ ಆ್ಯರನ್ ಫಿಂಚ್ ರನ್ ಔಟ್ ಆದರು. ಯಜುವೇಂದ್ರ ಚಾಹಲ್ ಓವರ್‌ನಲ್ಲಿ ಡೇವಿಡ್‌ವಾರ್ನರ್(56) ಕ್ಯಾಚ್ ನೀಡಿದರು. ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದಸ್ಟೀವ್ ಸ್ಮಿತ್(69) ಮತ್ತು ಉಸ್ಮಾನ್ ಖ್ವಾಜಾ(42) ಆಟಕ್ಕೆ ಭುವನೇಶ್ವರ್, ಬೂಮ್ರಾ ತಡೆಯಾದರು.
ಗ್ಲೆನ್ ಬ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್‌ವಿಕೆಟ್ ಉರುಳುತ್ತಿದ್ದಂತೆ ತಂಡ ಬಹುಬೇಗ ಕುಸಿಯುವ ಆತಂಕಕ್ಕೆ ಒಳಗಾಗಿತ್ತು. ಏಳನೇ ಕ್ರಮಾಂಕಿತ ಆಲೆಕ್ಸ್ ಕ್ಯಾರಿ(55) ಬಿರುಸಿನ ಆಟವಾಡಿ ತಂಡಕ್ಕೆ ಆಸರೆಯಾದರು. ಕ್ಯಾರಿ ಗೆಲುವಿನ ಆಸೆ ಚಿಗುರಿಸಿದರಾದರೂ ಮತ್ತೊಂದು ಕಡೆ ವಿಕೆಟ್ ಪತನ ತಡೆಯಲಾಗಲಿಲ್ಲ.
ಆರಂಭಿಕ ಬೌಲರ್‌ಗಳಾದ ಜಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಎಸೆತಗಳಲ್ಲಿ ವಾರ್ನರ್ ಹಾಗೂ ಆ್ಯರನ್ ಫಿಂಚ್ ಎಚ್ಚರಿಕೆಯ ಆಟ ಆಡಿದರು. ವಿಕೆಟ್ ಪಡೆಯುವ ನಿಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ನೀಡಲಾಯಿತು. ಆದರೆ, ಹಾರ್ದಿಕ್ ಎರಡನೇ ಓವರ್‌ನಲ್ಲಿಆಸ್ಟ್ರೇಲಿಯಾ ಭರ್ಜರಿ ಹೊಡೆಗಳ ಉತ್ತರ ನೀಡಿದೆ.ಪಾಂಡ್ಯ ಬೌಲಿಂಗ್‌ನಲ್ಲೇಆ್ಯರನ್ ಫಿಂಚ್ ರನ್ ಔಟ್ ಆದರು.
ಕ್ಷಣಕ್ಷಣದ ಸ್ಕೋರ್:https://bit.ly/2QXUHkI
ಭಾರತದ ಪರ ಶಿಖರ್ ಧವನ್(117) ಶತಕ ಹಾಗೂ ವಿರಾಟ್ ಕೊಹ್ಲಿ(82), ರೋಹಿತ್ ಶರ್ಮಾ(57) ಗಳಿಸಿದ ಅರ್ಧ ಶತಕದ ನೆರವಿನಿಂದ ಭಾರತ 350ರನ್ ಗಡಿ ದಾಟಲು ಸಾಧ್ಯವಾಯಿತು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಹಾರ್ದಿಕ್ ಪಾಂಡ್ಯ(48) ಮತ್ತು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ(27) ನಡೆಸಿದ ಬಿರುಸಿನ ಬ್ಯಾಟಿಂಗ್ ಸಹ ತಂಡದ ಮೊತ್ತ ಹೆಚ್ಚಲು ಕಾರಣವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.