ನವದೆಹಲಿ: ಕೋವಿಡ್-19 ಲಸಿಕೆ ವಿಶ್ವ ರಾಷ್ಟ್ರಗಳಿಗೆ ಒದಗಿಸುತ್ತಿರುವ ಭಾರತದ ಕೊಡುಗೆಯನ್ನು ಶ್ಲಾಘಿಸಿರುವ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ, ಜಗತ್ತೇ ನಮ್ಮ ಕುಟುಂಬ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಔದಾರ್ಯ ಹಾಗೂ ದಯೆ ದಿನ ನಿತ್ಯವೂ ಬೆಳೆಯುತ್ತಿದೆ. ಅಚ್ಚುಮೆಚ್ಚಿನ ದೇಶ ಎಂದು ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿದ್ದರು.
ಕೆವಿನ್ ಪೀಟರ್ಸನ್ ಅವರಿಗೀಗ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. ಭಾರತದ ಬಗೆಗಿನ ನಿಮ್ಮ ಪ್ರೀತಿಯನ್ನು ನೋಡಿ ಸಂತೋಷವಾಯಿತು. ಇಡೀ ಜಗತ್ತು ನಮ್ಮ ಕುಟುಂಬ ಎಂದು ನಾವು ನಂಬಿದ್ದೇವೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಮ್ಮ ಪಾತ್ರವನ್ನು ಬಲಪಡಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ಗೆ ಇದು ಕರಾಳ ಸಮಯ: ಕ್ರಿಕೆಟಿಗರ ಕಳವಳ
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವಿಶ್ವ ರಾಷ್ಟ್ರಗಳಿಗೆ ನೆರವಾಗುವ ಭಾಗವಾಗಿ ದಕ್ಷಿಣ ಆಫ್ರಿಕಾಗೆ ಭಾರತ ಲಸಿಕೆಯನ್ನು ರವಾನಿಸಿತ್ತು. ದಕ್ಷಿಣ ಆಫ್ರಿಕಾಗೆ ಬಂದಿಳಿದ ಲಸಿಕೆ ಚಿತ್ರವನ್ನು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಕೆವಿನ್ ಪೀಟರ್ಸನ್ ಭಾರತದ ಪಾತ್ರವನ್ನು ಕೊಂಡಾಡಿದ್ದರು.
ಏತನ್ಮಧ್ಯೆ ಕೋವಿಡ್-19 ಕಾರಣ ನೀಡಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೊಟಕುಗೊಳಿಸಿರುವ ಆಸ್ಟ್ರೇಲಿಯಾ ನೀತಿಯನ್ನು ಕೆವಿನ್ ಪೀಟರ್ಸನ್ ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.