ADVERTISEMENT

ಐಸಿಸಿ ಮಹಿಳಾ ವಿಶ್ವ ಟ್ವೆಂಟಿ–20: ಕಮರಿದ ಭಾರತದ ಫೈನಲ್ ಕನಸು 

ಏಜೆನ್ಸೀಸ್
Published 23 ನವೆಂಬರ್ 2018, 5:45 IST
Last Updated 23 ನವೆಂಬರ್ 2018, 5:45 IST
   

ನಾರ್ಥ್‌ ಸೌಂಡ್, ಆ್ಯಂಟಿಗಾ:ಐಸಿಸಿಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು ಮುಗ್ಗರಿಸಿದ್ದು, ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿದೆ.

ಆ್ಯಂಟಿಗಾ ಕ್ರೀಡಾಂಗಣದಲ್ಲಿ ಶುಕ್ರವಾರಬೆಳಗಿನ ಜಾವ (ಭಾರತೀಯ ಕಾಲಮಾನ) ಭಾರತ ಮಹಿಳಾ ತಂಡ ಇಂಗ್ಲೆಂಡ್ ಎದುರು 8 ವಿಕೆಟ್‌ಗಳ ನಷ್ಟಕ್ಕೆ ಸೋಲನ್ನು ಒಪ್ಪಿಕೊಂಡಿದೆ.

ಮೊದಲು ಬ್ಯಾಂಟಿಂಗ್ ಆಯ್ಕೆಮಾಡಿಕೊಂಡು ಕಣಕ್ಕಿಳಿದ ಭಾರತ, 19.3 ಓವರ್‌ಗೆ 112 ರನ್‌ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್ 17.2 ಓವರ್‌ಗೆ ಯಾವುದೇ ಪ್ರಯಾಸವಿಲ್ಲದೆ ಜಯಭೇರಿ ಬಾರಿಸಿತು.

ADVERTISEMENT

ಸ್ಮೃತಿ ಮಂದಣ್ಣ ಅವರು 24 ಎಸೆತಕ್ಕೆ 33, ಜೆಮಿಯಾ ರಾಡ್ರಿಗಸ್ 26 ಎಸೆತಕ್ಕೆ 26, ಇನ್ನು ಕೀಪರ್ ಹರ್ಮನ್ ಪ್ರೀತ್ ಕೌರ್ 20 ಎಸೆತಕ್ಕೆ 16 ರನ್‌ಗಳ ಶ್ರಮ ತಂಡವನ್ನು ಮುನ್ನಡೆಸುವಲ್ಲಿ ಫಲಕಾರಿಯಾಗಲಿಲ್ಲ.

ವಿಶ್ವ ವಿಜಯಿಯಾಗಲು ಇನ್ನೆರಡೇ ಹೆಜ್ಜೆಗಳನ್ನು ಸಾಗುವ ತವಕದಲ್ಲಿದ್ದಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆಹಳೆಯ ಸೋಲುಗಳ ನೋವು ಮರೆಯಲು ಇದ್ದ ಅವಕಾಶವೂ ದೂರವಾಯಿತು.

ಇದರಲ್ಲಿ ಗೆದ್ದ ಇಂಗ್ಲೆಂಡ್ ಫೈನಲ್‌ನಲ್ಲಿ ಕಾಂಗರೂ ಪಡೆಯ ವಿರುದ್ಧ ಸೆಣಸಲಿದೆ. ಆಸ್ಟ್ರೇಲಿಯಾ ತಂಡ ವೆಸ್ಟ್‌ಇಂಡೀಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.