ಸೌತಾಂಪ್ಟನ್: ಮಳೆಯಿಂದಾಗಿ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭಗೊಂಡ 5ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ನ್ಯೂಜಿಲೆಂಡ್ ಭೋಜನ ವಿರಾಮಕ್ಕೆ 5 ವಿಕೆಟ್ ಕಳೆದುಕೊಂಡು 135 ರನ್ ಕಲೆ ಹಾಕಿದೆ.
ಭಾರತದ ಪರ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮೊಹಮ್ಮದ್ ಶಮಿ ಕಿವೀಸ್ ತಂಡದ ರನ್‌ಗತಿಗೆ ಬ್ರೇಕ್ ಹಾಕಿದ್ದಾರೆ.
ಕಿವೀಸ್ ತಂಡದ ಪಾಲಿನ ತಡೆಗೋಡೆಯಂತೆ ನಿಂತಿರುವ ನಾಯಕ ಕೇನ್ ವಿಲಿಯಮ್ಸನ್ 106 ಎಸೆತಗಳನ್ನು ಎದುರಿಸಿ ಎರಡು ಬೌಂಡರಿಗಳುಳ್ಳ 19 ರನ್ ಗಳಿಸಿ ಕ್ರೀಸ್‌ನಲ್ಲೇ ಉಳಿದಿದ್ದಾರೆ. ಊಟದ ವಿರಾಮದ ಬಳಿಕ ಕೊಲಿನ್ ಡೆ ಗ್ರಾಂಡ್‌ಹೋಮ್ ನಾಯಕನಿಗೆ ಸಾತ್ ನೀಡುತ್ತಾರೆಯೇ ಕಾದು ನೋಡಬೇಕಿದೆ.
ಎರಡು ಆಕರ್ಷಕ ಬೌಂಡರಿಗಳೊಂದಿಗೆ 11 ರನ್ ಗಳಿಸಿದ್ದ ರಾಸ್ ಟೇಲರ್ ಮೊಹಮ್ಮದ್ ಶಮಿ ಓವರ್‌ನಲ್ಲಿ ಶುಭಮನ್ ಗಿಲ್‌ಗೆ ಕ್ಯಾಚ್ ನೀಡಿ ನಿರಾಸೆ ಹೊಂದಿದರು. ಇಶಾಂತ್ ಶರ್ಮಾ ದಾಳಿಗೆ 7 ರನ್ ಗಳಿಸಿದ್ದ ಹೆನ್ರಿ ನಿಕೋಲ್ಸ್ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮೊಹಮ್ಮದ್ ಶಮಿ ಬೌಲಿಂಗ್ ದಾಳಿಗೆ ಬಿಜೆ ವಾಟ್ಲಿಂಗ್ ಕ್ಲೀನ್ ಬೌಲ್ಡ್ ಆದರು.
ಒಟ್ಟು 70.1 ಓವರ್‌ಗಳನ್ನು ಎದುರಿಸಿರುವ ನ್ಯೂಜಿಲೆಂಡ್ 4 ವಿಕೆಟ್‌ಗಳನ್ನು ಕಳೆದುಕೊಂಡು 135 ರನ್ ಗಳಿಸಿದೆ. ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 217 ರನ್‌ಗಳಿಗೆ ಆಲೌಟ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.