ಮುಂಬೈ: ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು, ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಇಲ್ಲಿನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.
ಅಂತಿಮ ಇಲೆವೆನ್‌ನಲ್ಲಿ ವಿದೇಶದ ನಾಲ್ವರಿಗೆ ಮಾತ್ರ ಆಡಲು ಅವಕಾಶ ಇರುವುದರಿಂದ ಆರ್‌ಸಿಬಿ ಪರ ಹೆಥರ್ ನೈಟ್, ಎಲೈಸ್ ಪೆರಿ, ಮೇಗನ್ ಶುಟ್ ಮತ್ತು ಸೋಫಿ ಡಿವೈನ್ ಅವರು ಕಣಕ್ಕಿಳಿದಿದ್ದಾರೆ. ನಾಯಕಿ ಸ್ಮೃತಿ ಸೇರಿದಂತೆ ರಿಚಾ ಘೋಷ್ ಮತ್ತು ರೇಣುಕಾ ಠಾಕೂರ್ ತಂಡದ ಭರವಸೆ ಎನಿಸಿದ್ದಾರೆ.
ಭಾರತ ತಂಡದ ಹಲವು ಪ್ರಮುಖ ಆಟಗಾರ್ತಿಯರನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಡೆಲ್ಲಿ ತಂಡ, ಆರ್‌ಸಿಬಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ.
ಡೆಲ್ಲಿ ತಂಡವನ್ನು ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮುನ್ನಡೆಸುತ್ತಿದ್ದಾರೆ.
ಡೆಲ್ಲಿಗೆ ಉತ್ತಮ ಆರಂಭ
ಡೆಲ್ಲಿ ತಂಡದ ಪರ ಇನಿಂಗ್ಸ್ ಆರಂಭಿಸಿರುವ ಶೆಫಾಲಿ ವರ್ಮಾ (29) ಹಾಗೂ ನಾಯಕಿ ಮೆಗ್ ಲ್ಯಾನಿಂಗ್ (28) ಉತ್ತಮ ಆರಂಭ ಒದಗಿಸಿದ್ದಾರೆ. ಬಿರುಸಿನ ಬ್ಯಾಟಿಂಗ್ ನಡೆಸುತ್ತಿರುವ ಈ ಜೋಡಿ ಮುರಿಯದ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 57 ರನ್ ಕಲೆಹಾಕಿದೆ.
ಆಡುವ ಹನ್ನೊಂದರ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂದಾನ (ನಾಯಕಿ), ರಿಚಾ ಘೋಷ್, ಹೆಥರ್ ನೈಟ್, ಎಲೈಸ್ ಪೆರಿ, ಮೇಗನ್ ಶುಟ್, ಸೋಫಿ ಡಿವೈನ್, ರೇಣುಕಾ ಠಾಕೂರ್, ಕನಿಖಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ದಿಶಾ ಕಾಸತ್
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಜೆಸ್ ಜೋನಾಸೆನ್, ಮೆರಿಜನ್ ಕಾಪ್, ಅಲೈಸ್ ಕ್ಯಾಪ್ಸಿ, ತಾರಾ ನೊರಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.