ADVERTISEMENT

ಮಹಿಳಾ ಟಿ20 ರ‍್ಯಾಂಕಿಂಗ್‌: 5ನೇ ಸ್ಥಾನದಲ್ಲಿ ಮಂದಾನ

ಪಿಟಿಐ
Published 23 ಜುಲೈ 2024, 16:43 IST
Last Updated 23 ಜುಲೈ 2024, 16:43 IST
 ಸ್ಮೃತಿ ಮಂದಾನಾ
 ಸ್ಮೃತಿ ಮಂದಾನಾ   

ದುಬೈ: ಭಾರತ ಮಹಿಳಾ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಅವರು ಮಂಗಳವಾರ ಬಿಡುಗಡೆಯಾದ ಐಸಿಸಿ ಮಹಿಳಾ ಟಿ20 ರ್‍ಯಾಂಕಿಂಗ್‌ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 

ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಮತ್ತು ಅಬ್ಬರದ ಬ್ಯಾಟರ್‌ ಶಫಾಲಿ ವರ್ಮಾ ಜಂಟಿ 11 ಕ್ರಮಾಂಕದಲ್ಲಿ ಇದ್ದಾರೆ.

ಹರ್ಮನ್‌ ಪ್ರೀತ್‌ ಒಂದು ಸ್ಥಾನ ಮೇಲೇರಿದ್ದರೆ, ಶಫಾಲಿ ನಾಲ್ಕು ಸ್ಥಾನ ಏರಿಕೆ ಕಂಡಿದ್ದಾರೆ. ಉಳಿದಂತೆ ಜೆಮಿಯಾ ರಾಡ್ರಿಗ 19ನೇ ಸ್ಥಾನದಲ್ಲಿದ್ದಾರೆ. ಅಗ್ರ 20 ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ರಿಚಾ ಘೋಷ್‌24 ಕ್ರಮಾಂಕದಲ್ಲಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ಬೆಥ್‌ ಮೂನಿ 769 ಅಂಕಗಳೊಂದಿಗೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ ಕ್ರಮಾಂಕದಲ್ಲಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್ನರ್‌ ದೀಪ್ತಿ ಶರ್ಮಾ ಮೂರನೇ ಕ್ರಮಾಂಕದಲ್ಲಿದ್ದು, ಸೀಮರ್‌ ರೇಣುಕಾ ಸಿಂಗ್‌ ಒಂಬತ್ತನೇ ಸ್ಥಾನದಲ್ಲಿದ್ದಾರೆ. ರಾಧಾ ಯಾದವ್‌ 20ನೇ ಸ್ಥಾನದಲ್ಲಿ ಇದ್ದಾರೆ.

ಯುವ ಸ್ಪಿನ್ನರ್‌ ಕರ್ನಾಟಕದ ಶ್ರೇಯಾಂಕಾ ಪಾಟೀಲ 19 ಸ್ಥಾನ ಏರಿಕೆ ಕಂಡಿದ್ದು, 41ನೇ ಕ್ರಮಾಂಕದಲ್ಲಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.