ನವದೆಹಲಿ: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ನಡುವಣ ಹಣಾಹಣಿಯನ್ನು ಎದುರು ನೋಡುತ್ತಿರುವುದಾಗಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
‘ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಬೌಲ್ಟ್– ಟಿಮ್ ಸೌಥಿ ಜೋಡಿ ದೊಡ್ಡ ಸವಾಲು ಒಡ್ಡಬಹುದು. ಬೌಲ್ಟ್– ರೋಹಿತ್ ಮುಖಾಮುಖಿ ನೋಡಲು ಕಾತರನಾಗಿದ್ದೇನೆ. ಕ್ರೀಡಾಂಗಣದಲ್ಲಿ ರೋಹಿತ್ ನೆಲಕಚ್ಚಿ ನಿಂತು, ಬೌಲ್ಟ್ ಅವರ ಆರಂಭಿಕ ಸ್ಪೆಲ್ ಎದುರಿಸಿದರೆ ನೋಡಲು ಸೊಗಸಾಗಿರುತ್ತದೆ‘ ಎಂದು ಸೆಹ್ವಾಗ್ ಹೇಳಿದ್ದಾರೆ.
ಇತ್ತೀಚೆಗಿನ ಸರಣಿಗಳಲ್ಲಿ ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ತೋರಿರುವ ಸಾಮರ್ಥ್ಯವು ಇಂಗ್ಲೆಂಡ್ ನೆಲದಲ್ಲೂ ಯಶಸ್ಸು ಸಿಗಲು ನೆರವಾಗಲಿದೆ ಎಂದಿದ್ದಾರೆ.
‘ಇದೇ ಮೊದಲ ಬಾರಿಗೆ ಇಂಗ್ಲೆಂ ಡ್‌ನಲ್ಲಿ ಆರಂಭಿಕನಾಗಿ ರೋಹಿತ್ ಕಣಕ್ಕಿಳಿಯಲಿದ್ದಾರೆ. 2014ರ ಪ್ರವಾಸದ ಅನುಭವ ಅವರಿಗೆ ನೆರವಾಗಲಿದೆ‘ ಎಂದು ವೀರೂ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.