ADVERTISEMENT

ಕ್ರಿಕೆಟ್: ಒಂದೇ ಓವರ್‌ನಲ್ಲಿ ಆರು ಬೌಂಡರಿ ಹೊಡೆದ ಪವನ್

ಪಿಟಿಐ
Published 25 ಜುಲೈ 2018, 19:30 IST
Last Updated 25 ಜುಲೈ 2018, 19:30 IST
 ಪವನ್ ಶಾ
ಪವನ್ ಶಾ   

ಹಂಬನಟೋಟ, ಶ್ರೀಲಂಕಾ: ಪವನ್ ಶಾ (282;332ಎಸೆತ, 33ಬೌಂಡರಿ, 1ಸಿಕ್ಸರ್) 19 ವರ್ಷದೊಳಗಿನವರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಎರಡನೇ ಆಟಗಾರನಾದರು.ಇದೇ ಇನಿಂಗ್ಸ್‌ನ ಒಂದು ಓವರ್‌ನಲ್ಲಿ ಸತತ ಆರು ಬೌಂಡರಿ ಹೊಡೆದು ದಾಖಲೆ ಮಾಡಿದರು.

ಪವನ್ ಅವರ ಆಟದ ಬಲದಿಂದ ಭಾರತದ 19 ವರ್ಸದೊಳಗಿನವರ ತಂಡವು ಶ್ರೀಲಂಕಾ 19 ವರ್ಷದೊಳಗಿನವರ ತಂಡದ ಎದುರು ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 613 ರನ್‌ ಗಳಿಸಿ ಡಿಕ್ಲೆರ್ ಮಾಡಿಕೊಂಡಿತು. ಆತಿಥೇಯ ತಂಡವು 49 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 140 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ 19 ವರ್ಷದೊಳಗಿನವರು: 8ಕ್ಕೆ 613 ಡಿಕ್ಲೆರ್ಡ್ (ಪವನ್ ಶಾ 282, ಅಥರ್ವ ತೈದೆ 177, ನಿಖಿಲ್ ವಡೇರಾ 64), ಶ್ರೀಲಂಕಾ: 49 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 140 (ಮೋಹಿತ್ ಜಾಂಗ್ರಾ 43ಕ್ಕೆ3).

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.