ನವದೆಹಲಿ:ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಎದುರು ಆಡಿ ಪರಾಭವಗೊಂಡುವಿಶ್ವಕಪ್ ಪಂದ್ಯಾವಳಿಯಿಂದ ಟೀಂ ಇಂಡಿಯಾ ಹೊರಬಿದ್ದಿದ್ದಕ್ಕೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಭಾರತದ ವ್ಯವಸ್ಥಾಪಕ ತಂಡವನ್ನು ಟೀಕಿಸಿದ್ದಾರೆ.
ನಾಲ್ಕನೇ ಕ್ರಮಾಂಕದ ಆಟಗಾರರ ಬಗ್ಗೆ ಹೆಚ್ಚು ಗಮನ ನೀಡಬೇಕಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಯುವರಾಜ್ ಹೇಳಿದ್ದಾರೆ. ನಾಲ್ಕನೇ ಕ್ರಮಾಂಕದ ಆಟಗಾರರು ಆ ಕ್ರಮಾಂಕದಲ್ಲಿ ಆಡಲು ವಿಫಲರಾಗುತ್ತಿದ್ದರೆ ಅವರು ವಿಶ್ವಕಪ್ ಆಡಲು ಹೋಗುತ್ತಿದ್ದಾರೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು.2003ರ ವಿಶ್ವಕಪ್ ಪಂದ್ಯಕ್ಕೆ ಮುನ್ನ ನ್ಯೂಜಿಲೆಂಡ್ ವಿರುದ್ಧ ಆಟವಾಡಿದಾಗ ನಾವೂ ವಿಫಲವಾಗಿದ್ದೆವು.ಆದರೆನಮ್ಮ ಅದೇ ತಂಡ ವಿಶ್ವಕಪ್ ನಲ್ಲಿಆಡಿತ್ತು.
ರಾಯುಡು ಬಗ್ಗೆ ವ್ಯವಸ್ಥಾಪಕ ತಂಡ ನಡೆದುಕೊಂಡ ರೀತಿ ನನಗೆ ಬೇಸರ ತಂದಿದೆ. ಅವರು ವಿಶ್ವಕಪ್ ತಂಡದಲ್ಲಿರಬೇಕಿತ್ತು. ನ್ಯೂಜಿಲೆಂಡ್ ತಂಡದ ವಿರುದ್ಧ ಅವರು ಚೆನ್ನಾಗಿ ಆಡಿದ್ದರೂ ಮೂರು ನಾಲ್ಕು ಇನ್ನಿಂಗ್ಸ್‌ನಲ್ಲಿ ಅವರು ಕಳಪೆ ಪ್ರದರ್ಶನ ತೋರಿದ್ದರಿಂದ ಅವರನ್ನು ಕೈ ಬಿಡಲಾಗಿತ್ತು.
ರಿಷಬ್ ಪಂತ್ ಬಂದರೂ ಅವರನ್ನು ಕೈ ಬಿಡಲಾಯಿತು.ಏಕದಿನ ಕ್ರಿಕೆಟ್ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕ ನಿರ್ಣಾಯಕವಾದ ಕ್ರಮಾಂಕವಾಗಿದೆ. ಈ ಕ್ರಮಾಂಕದಲ್ಲಿ ಯಾರಾದರೂ ಉತ್ತಮ ಪ್ರದರ್ಶನ ನೀಡಬೇಕು ಎಂದಾದರೆ ಅವರಿಗೆ ಬೆಂಬಲ ಅತ್ಯಗತ್ಯ. ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದ್ದಾರೆ ಎಂದು ಅವರನ್ನು ಕೈ ಬಿಡಬಾರದು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.