ಕೆಂಟ್: ಇಂಗ್ಲಿಷ್ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಕೌಂಟಿ ತಂಡಕ್ಕೆ ಪದಾರ್ಪಣೆ ಮಾಡಿರುವ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ನಾಟಿಂಗಮ್‌ಶೈರ್ ವಿರುದ್ಧ ಪಂದ್ಯದಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು.
ಆಯ್ಕೆಗಾರರ ಅವಕೃಪೆಗೆ ಒಳಗಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನವಂಚಿತರಾದ 33 ವರ್ಷದ ಚಾಹಲ್ ಮೊದಲ ವಿಡಿಷನ್ ಪಂದ್ಯದ ಎರಡನೇ ದಿನ 20 ಓವರುಗಳಲ್ಲಿ 52 ರನ್ನಿತ್ತು 3 ವಿಕೆಟ್ ಪಡೆದರು. ಕೆಂಟ್‌ನ 446 ರನ್‌ಗಳಿಗೆ ಉತ್ತರವಾಗಿ ಸೋಮವಾರ, ನಾಲ್ಕು ದಿನಗಳ ಪಂದ್ಯದ ಎರಡನೇ ದಿನದಾಟ ಮುಗಿದಾಗ ನಾಟಿಂಗಮ್‌ಶೈರ್ 8 ವಿಕೆಟ್‌ಗೆ 219 ರನ್ ಗಳಿಸಿದೆ.
ಮ್ಯಾಥ್ಯೂ ಮಾಂಟೆಗೊಮರಿ, ಲಿಂಡನ್ ಜೇಮ್ಸ್ ಮತ್ತು ಕೆಲ್ವಿನ್ ಹ್ಯಾರಿಸನ್ ಅವರ ವಿಕೆಟ್‌ಗಳನ್ನು ಪಡೆ ದರು. ಕೆಂಟ್ ಪರ ಅವರು ಮೂರು ಪಂದ್ಯಗಳನ್ನು (ನಾಟಿಂಗಮ್‌ಶೈರ್, ಲ್ಯಾಂಕಾಶೈರ್, ಸಾಮರ್ಸೆಟ್) ಆಡುವರು.
ಈ ಋತುವಿನ ಆರಂಭದಲ್ಲಿ ಭಾರತ ತಂಡದ ಪೇಸ್ ಬೌಲರ್ ಆರ್ಷದೀಪ್ ಅವರು ಕೆಂಟ್ ಪರ ಐದು ಪಂದ್ಯಗಳನ್ನಾಡಿ 13 ವಿಕೆಟ್‌ಗಳನ್ನು ಪಡೆದಿದ್ದರು.
ಚಾಹಲ್ ಈ ವರ್ಷದ ಜನವರಿಯಿಂದೀಚೆಗೆ ಭಾರತ ತಂಡದಲ್ಲಿ ಏಕದಿನ ಪಂದ್ಯ ಆಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಟಿ–20 ಸರಣಿಯಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡಕ್ಕೆ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.