ADVERTISEMENT

ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಯಜುವೇಂದ್ರ ಚಾಹಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2022, 10:21 IST
Last Updated 30 ಮಾರ್ಚ್ 2022, 10:21 IST
ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್   

ಪುಣೆ: ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ 250 ವಿಕೆಟ್‌ಗಳ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚಾಹಲ್, ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಹೈದರಾಬಾದ್ಬ್ಯಾಟರ್‌ಗಳನ್ನು ಕಾಡಿದ ಚಾಹಲ್ ಮೂರು ವಿಕೆಟ್‌ ಕಬಳಿಸಿದರು.

ಐಪಿಎಲ್‌ನಲ್ಲಿ 115 ಪಂದ್ಯಗಳನ್ನು ಆಡಿರುವ ಚಾಹಲ್ 142 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ಭಾರತಕ್ಕಾಗಿ 68 ವಿಕೆಟ್‌ಗಳನ್ನು (54 ಪಂದ್ಯ) ಕಬಳಿಸಿದ್ದಾರೆ. ಇದು ಕೂಡ ಭಾರತದ ಪರ ದಾಖಲೆಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಚಾಹಲ್ ಅವರನ್ನು ಪ್ರಸಕ್ತ ಸಾಲಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸ್ ಖರೀದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.