ADVERTISEMENT

ಬಿಎಫ್‌ಸಿ ಗೋಲುಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:03 IST
Last Updated 15 ಅಕ್ಟೋಬರ್ 2024, 14:03 IST
<div class="paragraphs"><p>ಬಿಎಫ್‌ಸಿ</p></div>

ಬಿಎಫ್‌ಸಿ

   

ಬೆಂಗಳೂರು: ಬಿಎಫ್‌ಸಿ ತಂಡವು ಮಂಗಳವಾರ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 8–1ರಿಂದ ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.

ಇಲ್ಲಿನ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿಯ ಜೋಶುವಾ ಡಿಸಿಲ್ವ (3ನೇ, 22ನೇ, 29ನೇ ಮತ್ತು 53ನೇ ನಿಮಿಷ) ಗೋಲುಗಳ ಸುರಿಮಳೆಗೈದರು. ರಶೀದ್‌ ಸಿ.ಕೆ. (39ನೇ ಮತ್ತು 42ನೇ ನಿ) ಎರಡು ಗೋಲು ಗಳಿಸಿದರೆ, ಸೋಹಂ ವಾರ್ಷ್ಣೇಯ (9ನೇ ನಿ) ಮತ್ತು ತಾರೋಮ್ ಕೆಲ್ವಿನ್ ಸಿಂಗ್ (44ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಎಎಸ್‌ಸಿ ಪರ ಏಕೈಕ ಗೋಲನ್ನು ವಹೆಂಗಬಾಮ್ ನೀರಜ್ ಸಿಂಗ್ (86ನೇ ನಿ) ದಾಖಲಿಸಿದರು.

ADVERTISEMENT

ದಿನದ ಮತ್ತೊಂದು ಪಂದ್ಯದಲ್ಲಿ ರಿಯಲ್‌ ಚಿಕ್ಕಮಗಳೂರು ಎಫ್‌ಸಿ ಮತ್ತು ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ಮುಖಾಮುಖಿಯಾಗಬೇಕಿತ್ತು. ಮಳೆಯ ಕಾರಣದಿಂದ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.