ನವದೆಹಲಿ: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕಳಪೆ ಮಟ್ಟದ ರೆಫರಿ ಕುರಿತು ಕೋಚ್‌ಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ರಾಷ್ಟ್ರೀಯ ಫೆಡರೇಶನ್‌ನ ಅಧಿಕಾರಿ ಟ್ರೆವರ್ ಕೆಟಲ್ ರೆಫರಿಗಳ ಗುಣಮಟ್ಟ ಸಾಕಷ್ಟು ಪಂದ್ಯಗಳಲ್ಲಿ ಸುಧಾರಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಐಎಸ್‌ಎಲ್ ಕ್ಲಬ್‌ನ ಹಲವಾರು ವಿದೇಶಿ ಕೋಚ್‌ಗಳು ಈ ಹಿಂದೆ ಕಳಪೆ ಮಟ್ಟದ ರೆಫರಿ ಬಗ್ಗೆ ಟೂರ್ತಿ ವೇಳೆಯಲ್ಲೇ ಮಾತನಾಡಿದ್ದರು. ಕೆಲವು ತಿಂಗಳ ಹಿಂದೆ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್‌ನ ಅಧ್ಯಕ್ಷ (ಎಐಎಫ್‌ಎಫ್) ಚೌಬೆ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಕೆಲವು ದಿನಗಳ ಹಿಂದೆ ಎರಡು ವಿವಾದಿತ ವಿವಾದಾತ್ಮಕ ರೆಫರಿ ನಿರ್ಧಾರಗಳು ಕೇರಳ ಬ್ಲಾಸ್ಟರ್ಸ್ ಮತ್ತು ಹೈದ್ರಾಬಾದ್ ಎಫ್‌ಸಿ ನಡುವಿನ ಪಂದ್ಯದ ವೇಳೆ ನಡೆದಿತ್ತು.
ಇಂಡಿಯನ್ ಸೂಪರ್ ಲೀಗ್ ವೇಳೆ ವಿದೇಶಿ ಕೋಚ್‌ಗಳು ಅಸಮಾಧಾನ ಹೊರಹಾಕಿರುವ ಕುರಿತು ಎಐಎಫ್‌ಎಫ್‌ನ ಮುಖ್ಯ ರೆಫರಿ ಅಧಿಕಾರಿ (ಸಿಆರ್‌ಒ) ಭಾರತಿಯ ರೆಫರಿಗಳ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಿಸಿದೆ. ಜತೆಗೆ ಕಠಿಣ ಶಿಸ್ತು ಕ್ರಮಕೈಗೊಳ್ಳುವ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದಿದ್ದಾರೆ.
ಕೀ ಮ್ಯಾಚ್ ಇನ್ಸಿಡೆಂಟ್ (ಕೆಎಂಐ) ನಿಖರವಾಗಿ ಗಮನಿಸಲಾಗುತ್ತಿದ್ದು ರೆಫರಿಗಳ ಗುಣಮಟ್ಟ ಶೇ.85ರಷ್ಟು ಗುರಿಮಟ್ಟಬೇಕಿದೆ. ಅಚ್ಚರಿಯಂದರೆ ರೆಫರಿಗಳ ಮೇಲಿನ ಮುಖ್ಯ ಕೋಚ್‌ಗಳ ಸರ್ವೆಯಲ್ಲಿ ವಿಎಆರ್ ತಂತ್ರಜ್ಞಾನದ ಸಹಾಯವಿಲ್ಲದೇ ಶೇ. 82.5 ರಷ್ಟು ನಿಖರತೆಯನ್ನು ನಿರೀಕ್ಷಿಸಲಾಗಿದೆ.
ಸದ್ಯ ಕೆಎಂಐ ಶೇಖಡವಾರು ನಿಖರತೆ ಏರಿಳಿತ ಕಂಡಿದೆ. ವಿಎಆರ್ (ವಿಡಿಓ ಅಸಿಸ್ಟೆಂಟ್ ರೆಫರಿ) ತಂತ್ರಜ್ಞಾನ ಅಳವಡಿಕೆಯಿಂದ ಶೇ.97ರಷ್ಟು ಸುಧಾರಿಸಬಹುದಾಗಿದೆ.
ವಿಎಆರ್ ತಂತ್ರಜ್ಞಾನ ಐಎಸ್‌ಎಲ್ ಲೀಗ್‌ನಲ್ಲಿ ಅಳವಡಿಸಿಲ್ಲ. ಮುಂದಿನ ಆವೃತ್ತಿಯಿಂದ ಭಾರತ ಫುಟ್ಬಾಲ್ ಫೆಡರೇಶನ್ ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆ ಹೆಚ್ಚಿದೆ.
ಕೇರಳ ಬ್ಲಾಸ್ಟರ್ಸ್ ಮತ್ತು ಹೈದ್ರಾಬದ್ ಎಫ್‌ಸಿ ನಡುವಿನ ಪಂದ್ಯದ ಪ್ರಮಾದದ ಕುರಿತು ಪ್ರತಿಯೊಬ್ಬ ಪಂದ್ಯದ ರೆಫರಿಗಳ ಬಗ್ಗೆ ವೈಯಕ್ತಿಕ ಗಮನಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ನೂತನ ಪ್ರಕ್ರಿಯೆಯನ್ನು ಅಳವಡಿಸಲಾಗಿದೆ. ಐಎಸ್‌ಎಲ್ ಪಂದ್ಯವನ್ನು ಎಎಫ್‌ಸಿ ರೆಫರಿ ಏಸೆಸ್ಸರ್ಸ್ ಮತ್ತು ಮಾಜಿ ಫಿಫಾ ರೆಫರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.