ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಎಜಿಒಆರ್ಸಿ ತಂಡದವರು, ಪ್ರಸನ್ನ ಕುಮಾರ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಬಿ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಶುಕ್ರವಾರ 2–1 ಗೋಲುಗಳಿಂದ ವಿಜಯನಗರ ಎಫ್ಸಿ ತಂಡವನ್ನು ಮಣಿಸಿದರು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಜಿಒಆರ್ಸಿ ಪರ ಕಾರ್ತಿಕೇಯನ್ ಜೆ. (40ನೇ ನಿಮಿಷ) ಮತ್ತು ಅರುಣ್ ಪಾಂಡೆ (79ನೇ ನಿ) ತಲಾ ಒಂದು ಗೋಲು ಗಳಿಸಿದರು. ವಿಜಯನಗರ ಪರ ಸೆಮಿನ್ಲಾಲ್ ಹಾಕಿಪ್ (6ನೇ ನಿ) ಚೆಂಡನ್ನು ಗುರಿ ಸೇರಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಎಫ್ಸಿ ಡೆಕ್ಕನ್ ತಂಡವು 1–1 ಗೋಲುಗಳಿಂದ ಬಿಟಿಎಂ ತಂಡದೊಂದಿಗೆ ಡ್ರಾ ಸಾಧಿಸಿತು. ಡೆಕ್ಕನ್ನ ಸರಬಿ ಕೋಮಿಲ್ ಟನ್ (32ನೇ ನಿ) ಮತ್ತು ಬಿಡಿಎಂನ ವಿಲಾಸಿಲಿ ಸಂಚು (16ನೇ) ತಲಾ ಒಂದು ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.