ADVERTISEMENT

ಬಿಡಿಎಫ್‌ಎ ಫುಟ್‌ಬಾಲ್‌ | ಹುಸೇನ್ ಹ್ಯಾಟ್ರಿಕ್‌: ಯುನೈಟೆಡ್‌ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:46 IST
Last Updated 20 ಅಕ್ಟೋಬರ್ 2024, 15:46 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಬೆಂಗಳೂರು: ಮೊಹಮ್ಮದ್‌ ಅಲ್ತಾಬ್ ಹುಸೇನ್ ಅವರ ಹ್ಯಾಟ್ರಿಕ್‌ ಗೋಲುಗಳ ಬಲದಿಂದ ಸೌತ್‌ ಯುನೈಟೆಡ್‌ ತಂಡವು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 4–2ರಿಂದ ಎಚ್‌ಎಎಲ್‌ ತಂಡವನ್ನು ಸೋಲಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹುಸೇನ್‌ (20ನೇ, 49ನೇ ಮತ್ತು 72ನೇ ನಿಮಿಷ) ಮೂರು ಗೋಲು ಗಳಿಸಿದರು. ಇಶಾನ್ ಸಾಹಿ (90+1ನೇ) ಒಂದು ಗೋಲು ದಾಖಲಿಸಿದರು. ಎಚ್‌ಎಎಲ್‌ ಪರ ತೇಜರಸ್‌ ಎಸ್‌ (28ನೇ ಮತ್ತು 77ನೇ) ಗೋಲು ತಂದಿತ್ತರು.

ADVERTISEMENT

ದಿನದ ಮತ್ತೊಂದು ಪಂದ್ಯದಲ್ಲಿ ಬಿಎಫ್‌ಸಿ ತಂಡವು 4–1 ಗೋಲುಗಳಿಂದ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವನ್ನು ಮಣಿಸಿತು. ಬಿಎಫ್‌ಸಿಯ ಜೋಶುವಾ ಡಿಸಿಲ್ವ (9ನೇ, 26ನೇ ಮತ್ತು 43ನೇ) ಹ್ಯಾಟ್ರಿಕ್‌ ಗೋಲು ಗಳಿಸಿದರೆ, ತೌರೆಮ್ ಕೆಲ್ವಿಯನ್ ಸಿಂಗ್ (64ನೇ) ಒಂದು ಗೋಲು ದಾಖಲಿಸಿದರು. ಸ್ಪೋರ್ಟಿಂಗ್‌ ಕ್ಲಬ್‌ ಪರ ಏಕೈಕ ಗೋಲುನ್ನು ತರುಣ್ ಕುಮಾರ್ (86ನೇ) ಗಳಿಸಿದರು.

ಇಂದಿನ ಪಂದ್ಯಗಳು

ಕೊಡಗು ಎಫ್‌ಸಿ– ಕಿಕ್‌ಸ್ಟಾರ್ಟ್‌ ಎಫ್‌ಸಿ (ಮಧ್ಯಾಹ್ನ 12.45)

ಬೆಂಗಳೂರು– ರಿಯಲ್‌ ಬೆಂಗಳೂರು (ಮಧ್ಯಾಹ್ನ 3.45)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.