ಬೆಂಗಳೂರು: ಬಿ.ಯು. ಮಿಥುನ್ ಮತ್ತು ನಿಖಿಲ್ ದಾಸ್ ಅವರ ಆಟದ ನೆರವಿನಿಂದ ಎಫ್‌ಸಿ ಡೆಕ್ಕನ್ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 2–1ರಿಂದ ಎಚ್‌ಎಎಲ್ ಎಫ್‌ಸಿ ತಂಡವನ್ನು ಮಣಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ಡೆಕ್ಕನ್ ತಂಡ ಒಂದು ಗೋಲಿನ ಅಂತರದಿಂದ ಜಯ ಸಾಧಿಸಿತು. ಆ ತಂಡದ ಮಿಥುನ್ (16ನೇ ನಿ.), ನಿಖಿಲ್ (47ನೇ) ಗೋಲು ದಾಖಲಿಸಿದರೆ, ಎಚ್‌ಎಎಲ್ ತಂಡದ ಎಸ್. ಜಾನಿಕೋಮ್ (49) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಮತ್ತೊಂದು ಪಂದ್ಯದಲ್ಲಿ ಶೇಕ್ ಮುಜೀಬ್ ಅವರ ಹ್ಯಾಟ್ರಿಕ್ ಗೋಲುಗಳ ಬಲದಿಂದ ಎಂಇಜಿ ಅಂಡ್ ಸೆಂಟರ್ ಎಫ್‌ಸಿ ತಂಡವು 3–1ರಿಂದ ಸೌತ್ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು.
ಮುಜೀಬ್ ಅವರು (19, 25 ಮತ್ತು 89ನೇ) ಮೂರು ಬಾರಿ ಚೆಂಡನ್ನು ಗುರಿ ಸೇರಿಸಿದರೆ, ಎದುರಾಳಿ ತಂಡದ ವಿ.ಎಸ್. ತೋಟ್ಕಧಾರ್ ಜಿಮಿಕ್ (80) ಒಂದು ಗೋಲು ತಂದಿತ್ತರು.
ಇಂದಿನ ಪಂದ್ಯಗಳು (ಮೂರನೇ ಸುತ್ತು)
ಬಿಯುಎಫ್‌ಸಿ– ಯಂಗ್ ಚಾಲೆಂಜರ್ಸ್ಸ್ ಎಫ್‌ಸಿ (ಮಧ್ಯಾಹ್ನ 1.30)
ಎಂಎಫ್‌ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ– ಕೊಡಗು ಎಫ್‌ಸಿ (ಮಧ್ಯಾಹ್ನ 3.30)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.