ಬೆಂಗಳೂರು: ಸ್ಪೇನ್‌ನ ಮಾಜಿ ಆಟಗಾರ ಗೆರಾರ್ಡ್ ಜರಗೋಜಾ ಅವರನ್ನು ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡಕ್ಕೆ ಮುಂದಿನ ಎರಡು ವರ್ಷಗಳ ಅವಧಿಗೆ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.
ಪ್ರಸಕ್ತ ಋತುವಿನ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕಳಪೆ ಪ್ರದರ್ಶನದ ಬೆನ್ನಿಗೆ ಬೆಂಗಳೂರು ಫುಟ್‌ಬಾಲ್ ಕ್ಲಬ್ ತನ್ನ ಮುಖ್ಯ ಕೋಚ್ ಸೈಮನ್ ಗ್ರೇಸನ್ ಅವರನ್ನು ಕೈಬಿಟ್ಟಿತ್ತು. ಆ ಸ್ಥಾನಕ್ಕೆ 41 ವರ್ಷದ ಗೆರಾರ್ಡ್ ಅವರನ್ನು ನೇಮಿಸಲಾಗಿದೆ.
ಬಿಎಫ್‌ಸಿಗೆ ಗೆರಾರ್ಡ್ ಹೊಸ ಪರಿಚಯವೇನಲ್ಲ. ಈ ಹಿಂದೆ ಸಹಾಯಕ ತರಬೇತುದಾರರಾಗಿ ತಂಡದಲ್ಲಿ ಸೇವೆ ಸಲ್ಲಿಸಿರುವ ಅವರು, 2018–19ರ ಇಂಡಿಯನ್ ಸೂಪರ್ ಲೀಗ್‌ನ ವಿಜೇತ ಬಿಎಫ್‌ಸಿ ತಂಡದ ಭಾಗವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.