ADVERTISEMENT

ಐಎಸ್‌ಎಲ್‌: ಬಿಎಫ್‌ಸಿಗೆ ಒಡಿಶಾ ಎಫ್‌ಸಿ ಸವಾಲು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 14:35 IST
Last Updated 30 ಅಕ್ಟೋಬರ್ 2023, 14:35 IST
<div class="paragraphs"><p>ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ (ಬಲ) ಮತ್ತು ಡಿಫೆಂಡರ್ ರಾಬಿನ್‌ ಯಾದವ್ ಅಭ್ಯಾಸ ನಡೆಸಿದರು </p></div>

ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ (ಬಲ) ಮತ್ತು ಡಿಫೆಂಡರ್ ರಾಬಿನ್‌ ಯಾದವ್ ಅಭ್ಯಾಸ ನಡೆಸಿದರು

   

–ಬಿಎಫ್‌ಸಿ ಮೀಡಿಯಾ ಚಿತ್ರ

ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡದವರು ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.

ADVERTISEMENT

ತವರು ಅಂಗಳದಲ್ಲಿ ಕಳೆದ ವಾರ ನಡೆದಿದ್ದ ಹಣಾಹಣಿಯಲ್ಲಿ ಎಫ್‌ಸಿ ಗೋವಾ ಜತೆ ಗೋಲುರಹಿತ ಡ್ರಾ ಮಾಡಿಕೊಂಡಿದ್ದ ಬಿಎಫ್‌ಸಿ ತಂಡ, ಕಳಿಂಗ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಪೂರ್ಣ ಮೂರು ಪಾಯಿಂಟ್ಸ್‌ ಕಲೆಹಾಕಲು ಪ್ರಯತ್ನಿಸಲಿದೆ. ಒಡಿಶಾ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ಕೈಯಲ್ಲಿ 1–2 ರಿಂದ ಸೋತಿತ್ತು.

ನಾಲ್ಕು ಪಂದ್ಯಗಳನ್ನು ಆಡಿರುವ ಸುನಿಲ್‌ ಚೆಟ್ರಿ ಬಳಗ ನಾಲ್ಕು ಪಾಯಿಂಟ್ಸ್‌ಗಳೊಂದಿಗೆ 10ನೇ ಸ್ಥಾನದಲ್ಲಿದೆ. ತಲಾ ಒಂದು ಗೆಲುವು ಮತ್ತು ಡ್ರಾ ಸಾಧಿಸಿರುವ ಬೆಂಗಳೂರಿನ ತಂಡ, ಎರಡು ಪಂದ್ಯಗಳನ್ನು ಸೋತಿದೆ. ಒಡಿಶಾ ಎಫ್‌ಸಿ ಕೂಡಾ ಇಷ್ಟೇ ಪಾಯಿಂಟ್ಸ್‌ ಕಲೆಹಾಕಿದೆ. ಆದರೆ ಉತ್ತಮ ಗೋಲು ವ್ಯತ್ಯಾಸದಲ್ಲಿ ಎಂಟನೇ ಸ್ಥಾನದಲ್ಲಿದೆ.

‘ಒಡಿಶಾ ತಂಡ ಕಳೆದ ಋತುವಿನಲ್ಲಿ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡಿತ್ತು. ಆದರೆ ಬಳಿಕ ನಡೆದಿದ್ದ ಸೂಪರ್‌ ಕಪ್‌ ಟೂರ್ನಿ ಜಯಿಸಿತ್ತು. ಹೊಸ ಕೋಚ್‌ (ಸೆರ್ಜಿಯೊ ಲೊಬೆರೊ) ಅವರ ಮಾರ್ಗದರ್ಶನ ಮತ್ತು ಕೆಲವು ಹೊಸ ಆಟಗಾರರನ್ನು ಸೇರಿಸಿಕೊಂಡಿರುವ ತಂಡದಿಂದ ಪ್ರಬಲ ಪೈಪೋಟಿ ನಿರೀಕ್ಷಿಸುತ್ತಿದ್ದೇವೆ’ ಎಂದು ಬಿಎಫ್‌ಸಿ ಕೋಚ್‌ ಸೈಮನ್‌ ಗ್ರೇಸನ್‌ ಹೇಳಿದ್ದಾರೆ.

ಪಂದ್ಯ ಆರಂಭ: ರಾತ್ರಿ 8

ನೇರ ಪ್ರಸಾರ: ಸ್ಪೋರ್ಟ್ಸ್‌ 18 ನೆಟ್‌ವರ್ಕ್‌, ಜಿಯೊ ಸಿನೆಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.