ಮ್ಯಾಡ್ರಿಡ್: ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಮೋಡಿ ಮಾಡಿದ ಕರೀಂ ಬೆಂಜೆಮಾ ರಿಯಲ್ ಮ್ಯಾಡ್ರಿಡ್ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿದರು.
ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನ ಎರಡನೇ ಲೆಗ್‌ನಲ್ಲಿ ಮಂಗಳವಾರ ರಿಯಲ್ ಮ್ಯಾಡ್ರಿಡ್ 2–3ರಿಂದ ಚೆಲ್ಸಿ ಎದುರು ಸೋತರೂ ಸರಾಸರಿ ಗೋಲು ಗಳಿಕೆಯ ಆಧಾರದಲ್ಲಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತು.
ಮೊದಲ ಲೆಗ್‌ನಲ್ಲಿ ಬೆಂಜೆಮಾ ಅವರ ಹ್ಯಾಟ್ರಿಕ್ ಬಲದಿಂದ ಮ್ಯಾಡ್ರಿಡ್ 3–1ರಿಂದ ಚೆಲ್ಸಿಗೆ ಸೋಲುಣಿಸಿತ್ತು. ಹೀಗಾಗಿ ಎರಡೂ ಪಂದ್ಯಗಳನ್ನು ಪರಿಗಣಿಸಿದರೆ ಆತಿಥೇಯ ತಂಡವು 5–4ರಿಂದ ಮುಂದಿತ್ತು.
ಈ ಪಂದ್ಯದಲ್ಲಿ ಚೆಲ್ಸಿ ಪರ ಮ್ಯಾಸನ್ ಮೌಂಟ್ (15ನೇ ನಿಮಿಷ), ಆಂಟೊನಿಯೊ ರೂಡಿಜೆರ್ (51ನೇ ನಿ.) ಮತ್ತು ಟಿಮೊ ವೆರ್ನೆರ್ (75ನೇ ನಿ.) ಕಾಲ್ಚಳಕ ತೋರಿದ್ದರು. 80ನೇ ನಿಮಿಷದಲ್ಲಿ ರೋಡ್ರಿಗೊಮ್ಯಾಡ್ರಿಡ್ ತಂಡದ ಮೊದಲ ಗೋಲು ಗಳಿಸಿದರು. 96ನೇ ನಿಮಿಷದಲ್ಲಿ ವಿನ್ಸಿಯಸ್ ಜೂನಿಯರ್ ಅವರ ನೆರವು ಪಡೆದ ಬೆಂಜೆಮಾ ಹೆಡರ್ ಮೂಲಕ ಗೋಲು ದಾಖಲಿಸಿದರು.
ಬೆಂಜೆಮಾ ಅವರಿಗೆ ಈ ಆವೃತ್ತಿಯಲ್ಲಿ ಇದು 12ನೇ ಗೋಲು.
ಬೇಯರ್ನ್‌ಗೆ ವಿಲ್ಲಾರೆಲ್ ಆಘಾತ: ಎಂಟರಘಟ್ಟದ ಮತ್ತೊಂದು ಬೇಯರ್ನ್ ಮ್ಯೂನಿಕ್ ತಂಡಕ್ಕೆ ಆಘಾತ ನೀಡಿದ ವಿಲ್ಲಾರೆಲ್ 2006ರ ನಂತರ ಮೊದಲ ಬಾರಿ ಟೂರ್ನಿಯ ಸೆಮಿಫೈನಲ್ ತಲುಪಿತು.
ಮ್ಯೂನಿಕ್‌ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿದವು. ಆದರೆ ಮೊದಲ ಲೆಗ್‌ನಲ್ಲಿ ವಿಲ್ಲಾರೆಲ್ ಗೆದ್ದಿದ್ದರಿಂದ 2–1ರ ಸರಾಸರಿಯಲ್ಲಿ ಜಯಿಸಿ ಮುನ್ನಡೆಯಿತು.
ಈ ಪಂದ್ಯದಲ್ಲಿ ತಂಡದ ಮ್ಯೂನಿಕ್ ಪರ ರಾಬರ್ಟ್ ಲೆವಾಂಡೊಸ್ಕಿ (52ನೇ ನಿ.) ಮತ್ತು ವಿಲ್ಲಾರೆಲ್ ಪರ ಸ್ಯಾಮ್ಯುಯೆಲ್ ಚುಕ್ವೆಜ್ (88ನೇ ನಿ.) ಗೋಲು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.