ADVERTISEMENT

ಎಎಫ್‌ಸಿ ಪಟ್ಟಿಯಲ್ಲಿ ಭುಟಿಯಾ: ಕೋವಿಡ್‌ ವಿರುದ್ಧ ವಿಡಿಯೊ ಜಾಗೃತಿ ಅಭಿಯಾನ

ಪಿಟಿಐ
Published 28 ಮಾರ್ಚ್ 2020, 19:30 IST
Last Updated 28 ಮಾರ್ಚ್ 2020, 19:30 IST
ಬೈಚುಂಗ್ ಭುಟಿಯಾ
ಬೈಚುಂಗ್ ಭುಟಿಯಾ   

ನವದೆಹಲಿ: ಭಾರತ ಫುಟ್‌ಬಾಲ್‌ನ ಹಿರಿಯ ಆಟಗಾರ ಬೈಚುಂಗ್‌ ಭುಟಿಯಾ ಅವರು ಕೋವಿಡ್‌–19 ಪಿಡುಗಿನ ವಿರುದ್ಧ ಏಷ್ಯನ್‌ ಫುಟ್‌ಬಾಲ್‌ ಕಾನ್ಫಡರೇಷನ್‌ (ಎಎಫ್‌ಸಿ) ನಡೆಸುತ್ತಿರುವ ಸಾರ್ವಜನಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಷಯವನ್ನು ಎಎಫ್‌ಸಿ ಶನಿವಾರ ತಿಳಿಸಿದೆ.

‘ಬ್ರೇಕ್‌ ದ ಚೈನ್‌’ ಹ್ಯಾಷ್‌ಟ್ಯಾಗ್‌ನಲ್ಲಿ ನಡೆಯುತ್ತಿರುವ ಈ ವಿಡಿಯೊಅಭಿಯಾನದಲ್ಲಿ ಏಷ್ಯನ್‌ ಫುಟ್‌ಬಾಲ್‌ನ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಜ್ಞಾಪಿಸುವ ಹಾಗೂ ಒಗ್ಗಟ್ಟು ಮೂಡಿಸುವ ಕಾರ್ಯವನ್ನು ಇವರು ಮಾಡಲಿದ್ದಾರೆ.

‘2018ರ ಎಎಫ್‌ಸಿ ವರ್ಷದ ಆಟಗಾರ್ತಿ ಪ್ರಶಸ್ತಿ ಪುರಸ್ಕೃತ, ಚೀನಾದ ವಾಂಗ್‌ ಶುವಾಂಗ್‌, ಭಾರತದ ಭುಟಿಯಾ ಹಾಗೂ ಜೊನ್‌ಬಕ್‌ ಹುಂಡೈ ಮೋಟರ್ಸ್ ತಂಡದ ಲೀ ಡಾಂಗ್‌ ಗೂಕ್‌ ಸೇರಿದಂತೆ ಹಲವು ಆಟಗಾರರು ಅಭಿಯಾನದಲ್ಲಿ ಪಾಲ್ಗೊಳ್ಳುವರು’ ಎಂದು ಎಎಫ್‌ಸಿ ತಿಳಿಸಿದೆ.

ADVERTISEMENT

ಸೌದಿ ಅರೇಬಿಯಾ ತಂಡದ ಹಿರಿಯ ಆಟಗಾರ ಯಾಸರ್‌ ಅಲ್‌ ಖತನಿ, ಹಾಂಗ್‌ಕಾಂಗ್‌ನ ಖ್ಯಾತ ಕೋಚ್‌ ಚಾನ್ ಯುವೆನ್‌ ಟಿಂಗ್‌ ಮತ್ತಿತರರು ಇದರಲ್ಲಿ ಸೇರಿದ್ದಾರೆ.

ದಶಕಕ್ಕೂ ಹೆಚ್ಚು ಕಾಲ ಭಾರತ ಫುಟ್‌ಬಾಲ್‌ ತಂಡದಲ್ಲಿ ಛಾಪು ಮೂಡಿಸಿದ್ದ ಭುಟಿಯಾ, 2011ರಲ್ಲಿ ನಿವೃತ್ತರಾಗಿದ್ದಾರೆ. ತಂಡದ ಪರ 100 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ಮೊದಲ ಆಟಗಾರ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.