ADVERTISEMENT

ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿದ್ದ ನಿರಾಶ್ರಿತರಿಗೆ ನೆರವಾದ ಭುಟಿಯಾ

ಪಿಟಿಐ
Published 31 ಮಾರ್ಚ್ 2020, 4:15 IST
Last Updated 31 ಮಾರ್ಚ್ 2020, 4:15 IST
ಬೈಚುಂಗ್ ಭುಟಿಯಾ 
ಬೈಚುಂಗ್ ಭುಟಿಯಾ    

ಕೋಲ್ಕತ್ತ: ಭಾರತದ ಹಿರಿಯ ಫುಟ್‌ಬಾಲ್‌ ಆಟಗಾರ ಬೈಚುಂಗ್‌ ಭುಟಿಯಾ ಅವರು ನಿರಾಶ್ರಿತರು ಹಾಗೂ ವಲಸಿಗರಿಗೆ ಆಶ್ರಯ ಕಲ್ಪಿಸಲು ಮುಂದಾಗಿದ್ದಾರೆ.

‘ಕೊರೊನಾ ಉಪಟಳವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ಲಾಕ್‌ಡೌನ್‌’ ಆದೇಶ ಹೊರಡಿಸಿವೆ. ಇದರಿಂದ ವಲಸಿಗರು ಹಾಗೂ ಕೂಲಿ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ಸಿಕ್ಕಿಂ ರಾಜ್ಯದ ಗಡಿಯಲ್ಲಿ ಭಾನುವಾರ ಸಾವಿರಾರು ಮಂದಿ ಜಮಾಯಿಸಿದ್ದನ್ನು ಗಮನಿಸಿದ್ದೇನೆ. ಗಂಗ್ಟಕ್‌ನಲ್ಲಿ ನಿರ್ಮಾಣ ಹಂತದ ಕಟ್ಟಡ ಇದೆ. ಅದರಲ್ಲಿ 100 ಮಂದಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇನೆ. ನಿರಾಶ್ರಿತರು ಇದರ ಪ್ರಯೋಜನ ಪಡೆದುಕೊಳ್ಳಲಿ. ಅವರಿಗೆ ಅಗತ್ಯ ದಿನಸಿಯನ್ನೂ ಒದಗಿಸುತ್ತೇನೆ’ ಎಂದು ಭುಟಿಯಾ ಸೋಮವಾರ ಹೇಳಿದ್ದಾರೆ.

ಭಾರತ ಫುಟ್‌ಬಾಲ್‌ ತಂಡದ ಆಟಗಾರರಾದ ಪ್ರೀತಂ ಕೋಟಾಲ್‌, ಪ್ರಣಯ್‌ ಹಲ್ದಾರ್‌ ಮತ್ತು ಪ್ರಬೀರ್‌ ದಾಸ್‌ ಅವರು ನಿರ್ಗತಿಕರ ನೆರವಿಗೆ ಧಾವಿಸಿದ್ದಾರೆ.

ADVERTISEMENT

‘ಬ್ಯಾರಕ್‌ಪುರ್‌ ಮಂಗಲ್‌ ಪಾಂಡೆ ಫುಟ್‌ಬಾಲ್‌ ತರಬೇತಿ ಶಿಬಿರದಲ್ಲಿರುವ ಮಕ್ಕಳು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅವರಿಗೆ ನೆರವಾಗಲು ನಿರ್ಧರಿಸಿದ್ದೇನೆ. ಸ್ನೇಹಿತರ ಸಹಾಯದೊಂದಿಗೆ ಎಲ್ಲರಿಗೂ ಊಟ ಒದಗಿಸಲು ಮುಂದಾಗಿದ್ದೇನೆ’ ಎಂದು ಪ್ರಣಯ್‌ ಹೇಳಿದ್ದಾರೆ.‌

₹ 1 ಲಕ್ಷ ನೀಡಿದ ಟೆನಿಸ್‌ ಸಂಸ್ಥೆ: ಕೋವಿಡ್‌‍ಪೀಡಿತರಿಗೆ ನೆರವಾಗಲು ಮುಂದಾಗಿರುವ ಬಂಗಾಳ ಟೆನಿಸ್‌ ಸಂಸ್ಥೆ (ಬಿಟಿಎ), ಬಂಗಾಳ ಒಲಿಂಪಿಕ್‌ ಸಂಸ್ಥೆಗೆ ₹ 1 ಲಕ್ಷ ದೇಣಿಗೆ ನೀಡಿದೆ.

ಬಿಟಿಎ ಕಾರ್ಯದರ್ಶಿ ಮಿಹಿರ್‌ ಮಿತ್ರಾ ಸೋಮವಾರ ಈ ವಿಷಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.