ADVERTISEMENT

ಇಂಡಿಯನ್ ಸೂಪರ್ ಲೀಗ್: ಕೇರಳ ಬ್ಲಾಸ್ಟರ್ಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:41 IST
Last Updated 6 ಡಿಸೆಂಬರ್ 2021, 4:41 IST
ಕೇರಳ ಬ್ಲಾಸ್ಟರ್ಸ್‌ (ಹಳದಿ ಪೋಷಾಕು) ಮತ್ತು ಒಡಿಶಾ ಎಫ್‌ಸಿ ತಂಡಗಳ ಆಟಗಾರರ ಪೈಪೋಟಿ  –ಪಿಟಿಐ ಚಿತ್ರ
ಕೇರಳ ಬ್ಲಾಸ್ಟರ್ಸ್‌ (ಹಳದಿ ಪೋಷಾಕು) ಮತ್ತು ಒಡಿಶಾ ಎಫ್‌ಸಿ ತಂಡಗಳ ಆಟಗಾರರ ಪೈಪೋಟಿ  –ಪಿಟಿಐ ಚಿತ್ರ   

ವಾಸ್ಕೊ, ಗೋವಾ: ಕೇರಳ ಬ್ಲಾಸ್ಟರ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು.

ಭಾನುವಾರ ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇರಳ ತಂಡವು 2–1ರಿಂದ ಒಡಿಶಾ ಫುಟ್‌ಬಾಲ್ ಕ್ಲಬ್ ಎದುರು ಜಯಿಸಿತು.

ಅಲ್ವೆರೊ ವಾಕೇಜ್ (62ನೇ ನಿ) ಮತ್ತು ಬದಲೀ ಆಟಗಾರ ಪ್ರಶಾಂತ್ ಕರುತಾಡತಕಣಿ (85ನಿ) ಅವರು ಎರಡನೇ ಅವಧಿಯಲ್ಲಿ ಹೊಡೆದ ಗೋಲುಗಳ ಬಲದಿಂದ ಕೇರಳ ತಂಡವು ಜಯಿಸಿತು. ಒಡಿಶಾ ತಂಡದಲ್ಲಿರುವ ಬೆಂಗಳೂರು ಹುಡುಗ ನಿಖಿಲ್ ರಾಜ್ ಗೋಲು ಹೊಡೆದರು.

ADVERTISEMENT

ಪಾಯಿಂಟ್ ಪಟ್ಟಿಯಲ್ಲಿ ಕೇರಳ ತಂಡವು ಆರನೇ ಸ್ಥಾನಕ್ಕೇರಿತು. ತಂಡದ ಖಾತೆಯಲ್ಲಿ ಐದು ಅಂಕಗಳಿವೆ. ಒಡಿಶಾ ಆರು ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳೂ ಸಮಬಲ ಸಾಧಿಸಿದ್ದವು. ಆದರೆ, ವಿರಾಮದ ನಂತರ ನಡೆದ ತುರುಸಿನ ಪೈಪೋಟಿಯಲ್ಲಿ ಕೇರಳ ಮೇಲುಗೈ ಸಾಧಿಸಿತು.

ಸೋಮವಾರದ ಪಂದ್ಯ

ಎಟಿಕೆ ಮೋಹನ್ ಬಾಗನ್–ಜೆಮ್ಶೆಡ್‌ಪುರ್ ಎಫ್‌ಸಿ

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.