ಚೆನ್ನೈ: ಕೋವಿಡ್–19ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ನಗರದ ಬಡ ಕಟುಂಬಗಳಿಗೆ ನೆರವಾಗಲು ಚೆನ್ನೈಯಿನ್ ಎಫ್‌ಸಿ (ಸಿಎಫ್‌ಸಿ) ಫುಟ್‌ಬಾಲ್ ತಂಡದ ಫೌಂಡೇಷನ್ ನಿರ್ಧರಿಸಿದೆ.
‘ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಸಿಎಫ್‌ಸಿಯು ತನ್ನ ಸಹ ಪ್ರಾಯೋಜಕ ಕಂಪನಿ ಎಸಿಕೆಒ ಇನ್ಸುರೆನ್ಸ್ ಜೊತೆಗೂಡಿ ಅಕ್ಷಯಪಾತ್ರ ಫೌಂಡೇಷನ್‌ನೊಂದಿಗೆ ಪಡಿತರ ಕಿಟ್ ವಿತರಿಸಲಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಹಭಾಗಿತ್ವದ ಭಾಗವಾಗಿ, ಚೆನ್ನೈಯಿನ್ ಎಫ್‌ಸಿ ಫೌಂಡೇಷನ್ ಮತ್ತು ಎಸಿಕೆಒ ಇನ್ಷುರೆನ್ಸ್ ಕಂಪನಿ ₹ 10 ಲಕ್ಷ ಸಂಗ್ರಹಿಸಿವೆ. ಈ ಹಣವನ್ನು ಚೆನ್ನೈನ ಸುತ್ತಮುತ್ತಲಿನ ಸಾವಿರ ಕೋವಿಡ್ ಪೀಡಿತ ಕುಟುಂಬಗಳಿಗೆ ಅಕ್ಷಯ ಪಾತ್ರ ಪ್ರತಿಷ್ಠಾನದ ಮೂಲಕ ಪಡಿತರ ಕಿಟ್‌ಗಳನ್ನು ಸಂಗ್ರಹಿಸಿ ವಿತರಿಸಲು ಬಳಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.