ಚೆನ್ನೈ: ಐಎಸ್‌ಎಲ್ ಫುಟ್‌ಬಾಲ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಅನುಭವಿ ಸಾಬಾ ಲಾಜ್ಲೊ ಅವರು ಮುಖ್ಯ ಕೋಚ್ ಆಗಿಭಾನುವಾರ ನೇಮಕಗೊಂಡಿದ್ದಾರೆ.
ಹಂಗರಿಯ 56 ವರ್ಷದ ಲಾಜ್ಲೊ ಅವರು ಏಷ್ಯಾದಲ್ಲಿ ಮೊದಲ ಬಾರಿ ಕೋಚಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅಂತರರಾಷ್ಟ್ರೀಯ ಹಾಗೂ ಕ್ಲಬ್ ಪಂದ್ಯಗಳು ಸೇರಿ ಎರಡು ದಶಕಕ್ಕೂ ಅಧಿಕ ಕಾಲ ಅವರು ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಲಿಥುವೇನಿಯಾ ಹಾಗೂ ಉಗಾಂಡಾ ರಾಷ್ಟ್ರೀಯ ತಂಡಗಳು, ಎಂಟು ಕ್ಲಬ್‌ಗಳು ಸೇರಿ ಎಂಟು ದೇಶಗಳಲ್ಲಿಲಾಜ್ಲೊ ತರಬೇತಿ ನೀಡಿದ್ದಾರೆ. ಚೆನ್ನೈ ಎಫ್‌ಸಿಯಲ್ಲಿ ಕೋಚ್ ಆಗಿದ್ದ ಓವೆನ್ ಕೊಯ್ಲೆ ಸ್ಥಾನವನ್ನು ಲಾಜ್ಲೊ ತುಂಬಲಿದ್ದಾರೆ. 2019–20ರ ಐಎಸ್‌ಎಲ್ ಋತುವಿನಲ್ಲಿ ಕೊಯ್ಲೆ ತಂಡವನ್ನು ಫೈನಲ್ ತಲುಪುವಂತೆ ಮಾಡಿದ್ದರು. ಇತ್ತೀಚೆಗೆ ಅವರು ಜಮ್‌ಷೆಡ್‌ಪುರ ಎಫ್‌ಸಿಯ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.
‘ಚೆನ್ನೈ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ‘ ಎಂದು ಲಾಜ್ಲೊ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.