ADVERTISEMENT

ಎಎಫ್‌ಸಿ ಕಪ್‌: ಕಣಕ್ಕಿಳಿಯಲು ಸುನಿಲ್ ಚೆಟ್ರಿ ಸಜ್ಜು

ಎಎಫ್‌ಸಿ ಕಪ್ ಪ್ರಾಥಮಿಕ ಹಂತದ ಟೂರ್ನಿ: ರೊಂಡು ಮುಸಾವ್‌ಗೆ ಸ್ಥಾನ

ಪಿಟಿಐ
Published 8 ಏಪ್ರಿಲ್ 2021, 15:50 IST
Last Updated 8 ಏಪ್ರಿಲ್ 2021, 15:50 IST
ಸುನಿಲ್ ಚೆಟ್ರಿ –ರಾಯಿಟರ್ಸ್ ಚಿತ್ರ
ಸುನಿಲ್ ಚೆಟ್ರಿ –ರಾಯಿಟರ್ಸ್ ಚಿತ್ರ   

ಬ್ಯಾಂಬೊಲಿಮ್‌: ಭಾರತದ ಖ್ಯಾತ ಆಟಗಾರ ಸುನಿಲ್ ಚೆಟ್ರಿ ಇಲ್ಲಿ ನಡೆಯಲಿರುವ ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯ ಪ್ರಾಥಮಿಕ ಹಂತದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿಯನ್ನು ಮುನ್ನಡೆಸಲಿದ್ದಾರೆ. ಕೋವಿಡ್‌–19ರಿಂದ ಗುಣಮುಖರಾಗಿರುವ ಅವರು ತಂಡವನ್ನು ಸೇರಿಕೊಂಡಿದ್ದಾರೆ.

ನೇಪಾಳದ ತ್ರಿಭುವನ್ ಆರ್ಮಿ ಎಫ್‌ಸಿಯನ್ನು ಬಿಎಫ್‌ಸಿಇದೇ 14ರಂದು ಎದುರಿಸಲಿದೆ. ಬಿಎಫ್‌ಸಿಯ ಅಭ್ಯಾಸ ನಿರತ ಮೂವರು ಆಟಗಾರರಿಗೆ ಕೋವಿಡ್ ಸೋಂಕು ಇರುವುದು ಬುಧವಾರ ದೃಢಪಟ್ಟಿತ್ತು. ತಂಡದ ಆಡಳಿತ ಗುರುವಾರ 29 ಮಂದಿಯ ಬಳಗವನ್ನು ಪ್ರಕಟಿಸಿದ್ದು ಗಾಬನ್‌ನ ಡಿಫೆಂಡರ್ ರೊಂಡು ಮುಸಾವು ಕಿಂಗ್ ಅವರಿಗೆ ಸ್ಥಾನ ನೀಡಲಾಗಿದೆ.

ಕೋಚ್ ಮಾರ್ಕೊ ಪೆಜಿಯೊಲಿ ತಂಡ ಸೇರಿದ ನಂತರ ಮೊದಲ ಪಂದ್ಯಕ್ಕೆ ಸಜ್ಜಾಗುತ್ತಿದ್ದು ಐದು ಮಂದಿ ಕಾಯ್ದಿರಿಸಿದ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ರೊಂಡು ಮುಸಾವು ಅವರಲ್ಲದೆ ಯುವಾನನ್ ಗೊಂಜಾಲೆಸ್, ಕ್ಲೀಟನ್ ಸಿಲ್ವಾ ಮತ್ತು ಎರಿಕ್ ಪಾರ್ಟಲು ಕೂಡ ವಿದೇಶಿ ಆಟಗಾರರ ಪಟ್ಟಿಯಲ್ಲಿದ್ದಾರೆ. ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಗೋಲ್‌ಕೀಪರ್ ಶಾರೋನ್ ಪಾಡತ್ತಿಲ್‌, ಮಿಡ್‌ಫೀಲ್ಡರ್ ದಮೈಫಂಗ್ ಲಿಂಗ್ಡೊ, ಮೊಹಮ್ಮದ್ ಇನಾಯತ್, ಸ್ಟ್ರೈಕರ್‌ಗಳಾದ ಅಕ್ಷದೀಪ್ ಸಿಂಗ್ ಮತ್ತು ಶಿವಶಕ್ತಿ ನಾರಾಯಣನ್‌ ಇದ್ದಾರೆ.

ADVERTISEMENT

ತಂಡ: ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು, ಲಾಲ್‌ಥುವಾಮಿಯ ರಾಲ್ಟೆ, ಲಾರಾ ಶರ್ಮಾ, ಶಾರೋನ್ ಪಾಡತ್ತಿಲ್; ಡಿಫೆಂಡರ್‌ಗಳು: ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಜುವಾನ್ ಗೊಂಜಾಲೆಸ್, ಮುಯಿರಂಗ್‌, ಅಜಿತ್ ಕುಮಾರ್, ಆಶಿಕ್ ಕುರುಣಿಯನ್‌, ಜೋ ಜೊಹೆರಿಯಾನ, ಪರಾಗ್ ಶ್ರೀವಸ್, ರೊಂಡು ಮುಸಾವು ಕಿಂಗ್‌, ಬಿಸ್ವ ದಾರ್ಜಿ; ಮಿಡ್‌ಫೀಲ್ಡರ್‌ಗಳು: ಎರಿಕ್ ಪಾರ್ಟಲು, ಸುರೇಶ್ ವಾಂಗ್ಜಂ, ಹರ್ಮನ್‌ಜೋತ್‌ ಖಾಬ್ರಾ, ನಂಗ್ಯಾಲ್ ಭೂಟಿಯಾ, ಇಮಾನ್ಯುಯೆಲ್‌, ದಮೈಫಂಗ್ ಲಿಂಗ್ಡೊ, ಮೊಹಮ್ಮದ್ ಇನಾಯತ್; ಫಾರ್ವರ್ಡ್‌: ಸುನಿಲ್ ಚೆಟ್ರಿ, ಎಡ್ಮಂಡ್ ಲಾಲ್‌ರಿಂಡಿಕಾ, ಉದಾಂತ ಸಿಂಗ್‌, ಕ್ಲೀಟನ್ ಸಿಲ್ವಾ, ಲಿಯಾನ್ ಆಗಸ್ಟಿನ್‌, ನೈರೇಮ್ ರೋಷನ್ ಸಿಂಗ್‌, ಶಿವಶಕ್ತಿ ನಾರಾಯಣನ್‌, ಅಕ್ಷದೀಪ್ ಸಿಂಗ್.

ಎಎಫ್‌ಸಿ ಚಾಂಪಿಯನ್ಸ್ ಲೀಗ್‌ಗೆ ಗೋವಾ ತಂಡ

ರಾಜ್ಯದ 11 ಆಟಗಾರರು ಒಳಗೊಂಡಂತೆ 28 ಮಂದಿಯ ತಂಡವನ್ನು ಎಎಫ್‌ಸಿ ಚಾಂಪಿಯನ್ಸ್ ಲೀಗ್‌ ಟೂರ್ನಿಗಾಗಿ ಎಫ್‌ಸಿ ಗೋವಾ ತಂಡವನ್ನು ಪ್ರಕಟಿಸಲಾಗಿದೆ.

ತಂಡ: ಗೋಲ್‌ಕೀಪರ್‌ಗಳು: ಮೊಹಮ್ಮದ್ ನವಾಜ್‌, ನವೀನ್ ಕುಮಾರ್, ಶುಭಂ ದಾಸ್‌, ಧೀರಜ್ ಸಿಂಗ್; ಡಿಫೆಂಡರ್‌ಗಳು: ಸ್ಯಾನ್ಸನ್‌ ಪೆರೇರ, ಸೆರಿಟಾನ್ ಫರ್ನಾಂಡಿಸ್‌, ಲಿಯಾಂಡರ್ ಡಿ ಕುನ್ನಾ, ಐವನ್ ಗೊಂಜಾಲೆಸ್‌, ಮೊಹಮ್ಮದ್ ಅಲಿ, ಜೇಮ್ಸ್‌ ಡೊನಾಚಿ, ಐಬಂಬ ಧೊಲಿಂಗ್‌, ಸೇವಿಯರ್ ಗಾಮಾ, ಆದಿಲ್ ಖಾನ್‌; ಮಿಡ್‌ಫೀಲ್ಡರ್‌ಗಳು: ಎಡು ಬೇಡಿಯಾ, ಗ್ಲಾನ್‌ ಮಾರ್ಟಿನ್ಸ್‌, ಪ್ರಿನ್ಸ್‌ಟನ್ ರೆಬೆಲ್ಲೊ, ಬ್ರೆಂಡನ್ ಫರ್ನಾಂಡಿಸ್, ಫ್ರಾಂಕಿ ಬುವಾಮ್‌, ರೆಡೀಮ್ ತ್ಲಾಂಗ್‌, ಮಾಕನ್‌ ವಿಂಕಿ, ಅಲೆಕ್ಸಾಂಡರ್ ರೊಮಾರಿಯೊ, ಅಮರ್‌ಜೀರ್‌ ಸಿಂಗ್‌, ರೋಮಿಯೊ ಫರ್ನಾಂಡಿಸ್‌; ಫಾರ್ವರ್ಡರ್‌: ಜಾರ್ಜ್‌ ಒರ್ಟಿಸ್‌, ದೇವೇಂದ್ರ ಮರ್ಗಾಂವ್ಕರ್‌, ಇಶಾನ್ ಪಂಡಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.