ADVERTISEMENT

ಭಾರತಕ್ಕೆ ಮಾಲ್ಡಿವ್ಸ್ ಸವಾಲು

ಸ್ಯಾಫ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ನಮ್ಮದು ನೆಚ್ಚಿನ ತಂಡವಲ್ಲ ಎಂದ ಕೋಚ್‌ ಕಾನ್‌ಸ್ಟಂಟೈನ್‌

ಪಿಟಿಐ
Published 8 ಸೆಪ್ಟೆಂಬರ್ 2018, 19:30 IST
Last Updated 8 ಸೆಪ್ಟೆಂಬರ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಢಾಕ: ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಭರವಸೆಯಲ್ಲಿರುವ ಭಾರತ ತಂಡ ಸ್ಯಾಫ್‌ ಕಪ್ ಫುಟ್‌ಬಾಲ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾನುವಾರ ಮಾಲ್ಡಿವ್ಸ್ ತಂಡದ ಸವಾಲನ್ನು ಎದುರಿಸಲಿದೆ. ಇಲ್ಲಿನ ಬಾಂಗಬಂಧು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಹಾಲಿ ಚಾಂಪಿಯನ್‌ ಭಾರತ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿತ್ತು. ಮಾಲ್ಡಿವ್ಸ್ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಜೊತೆ ಗೋಲುರಹಿತ ಡ್ರಾ ಮಾಡಿಕೊಂಡಿತ್ತು. ಪಾಯಿಂಟ್ ಪಟ್ಟಿಯಲ್ಲಿ ಭಾರತ ಈಗ ಅಗ್ರ ಸ್ಥಾನದಲ್ಲಿದೆ. ಸೆಮಿಫೈನಲ್‌ ಪ್ರವೇಶಿಸುವ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಮಾಲ್ಡಿವ್ಸ್‌ಗೆ ಭಾನುವಾರ ಜಯ ಅನಿವಾರ್ಯ ಆಗಿದೆ.

ಮಾಲ್ಡಿವ್ಸ್‌ ತಂಡದ ಎದುರಿನ ಈ ಹಿಂದಿನ ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ಸ್ಯಾಫ್‌ ಕಪ್‌ನಲ್ಲಿ 2015ರಲ್ಲಿ ಕೊನೆಯದಾಗಿ ಉಭಯ ತಂಡಗಳು ಮುಖಾಮುಖಿಯಾಗಿದ್ದು ಸುನಿಲ್‌ ಚೆಟ್ರಿ ಮತ್ತು ಜೆಜೆ ಲಾಲ್‌ಪೆಖ್ಲುವಾ ಅವರ ಅಮೋಘ ಆಟದ ನೆರವಿನಿಂದ 3–2ರಲ್ಲಿ ಗೆದ್ದಿತ್ತು.

ADVERTISEMENT

ತಂಡ ಬಲಿಷ್ಠವಾಗಿದ್ದರೂ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಲಾಗದು ಎಂದು ಭಾರತ ತಂಡದ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ಹೇಳಿದ್ದಾರೆ.

‘ತಂಡಕ್ಕೆ ಗೆಲ್ಲುವ ಅವಕಾಶಗಳಿವೆ. ಹಾಗೆಂದು ನಾವೇ ಗೆಲ್ಲುತ್ತೇವೆ ಎಂದು ಹೇಳಲಾಗದು. ಯುವ ಆಟಗಾರರೇ ಹೆಚ್ಚಿರುವ ತಂಡ ಅನುಭವಿಗಳನ್ನು ಹೊಂದಿರುವ ಮಾಲ್ಡಿವ್ಸ್ ಎದುರು ಕಣಕ್ಕೆ ಇಳಿಯಲಿದೆ’ ಎಂದು ಸ್ಟೀಫನ್ ಹೇಳಿದರು.

***
ಫಿಫಾ ರ‍್ಯಾಂಕಿಂಗ್‌

ಭಾರತ –96

ಮಾಲ್ಡಿವ್ಸ್‌ –198

ಮುಖಾಮುಖಿ

ಒಟ್ಟು ಪಂದ್ಯಗಳು –18

ಭಾರತದ ಜಯ – 13

ಮಾಲ್ಡಿವ್ಸ್‌ ಜಯ – 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.