ADVERTISEMENT

ಫುಟ್‌ಬಾಲ್ ಜಗತ್ತಿನಲ್ಲಿ 900 ಗೋಲು ದಾಖಲಿಸಿ ಹೊಸ ಇತಿಹಾಸ ಬರೆದ ರೊನಾಲ್ಡೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2024, 5:48 IST
Last Updated 6 ಸೆಪ್ಟೆಂಬರ್ 2024, 5:48 IST
<div class="paragraphs"><p>ರೊನಾಲ್ಡೊ</p></div>

ರೊನಾಲ್ಡೊ

   

ಬೆಂಗಳೂರು: ಪೋರ್ಚುಗಲ್‌ ದೇಶದ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ಅವರು ತಮ್ಮ ವೃತ್ತಿಜೀವನದಲ್ಲಿ 900 ಗೋಲು ದಾಖಲಿಸುವ ಮೂಲಕ ಫುಟ್‌ಬಾಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ADVERTISEMENT

ಗುರುವಾರ ಲಿಸ್ಬನ್‌ನಲ್ಲಿ ನಡೆದ ಯುಇಎಫ್‌ಎ ನೇಷನ್ಸ್ ಲೀಗ್ ಗುಂಪು ಹಂತದ ಪಂದ್ಯದಲ್ಲಿ ಕ್ರೊವೇಷಿಯಾದ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಈ ವಿಕ್ರಮ ಸಾಧಿಸಿದರು.

ಈ ಪಂದ್ಯದಲ್ಲಿ ಪೋರ್ಚುಗಲ್ 2-1 ಗೋಲುಗಳ ಅಂತರದಿಂದ ಕ್ರೊವೇಷಿಯಾವನ್ನು ಸೋಲಿಸಿತು. ಹಾಗೂ ರೊನಾಲ್ಡೊ ಅವರ ಹೊಸ ಮೈಲುಗಲ್ಲಿಗೆ ಸಾಕ್ಷಿಯಾಯಿತು.

ಈ ಐತಿಹಾಸಿಕ ಸಾಧನೆಯೊಂದಿಗೆ ರೊನಾಲ್ಡೊ ಫುಟ್‌ಬಾಲ್ ಇತಿಹಾಸದಲ್ಲಿ 900 ಗೋಲುಗಳನ್ನು ಹೊಡೆದ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಅವರು 900ನೇ ಗೋಲುಗಳಿಸುತ್ತಿದ್ದಂತೆ ಮೈದಾನದಲ್ಲಿ ಭಾವುಕರಾದರು. ಈ ವೇಳೆ ಮೈದಾನದಲ್ಲಿ ಸಹ ಆಟಗಾರರು ಹಾಗೂ ಅಭಿಮಾನಿಗಳು ರೊನಾಲ್ಡೊ ಅವರನ್ನು ಅಭಿನಂದಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು, ಫುಟ್‌ಬಾಲ್‌ ಪ್ರೇಮಿಗಳು, ಸೆಲೆಬ್ರಿಟಿಗಳು, ನಾನಾ ದೇಶಗಳ ರಾಜಕೀಯ ನಾಯಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅತಿಹೆಚ್ಚು ಗೋಲುಗಳಿಸಿದ ಆಟಗಾರರು

* ಕ್ರಿಸ್ಟಿಯಾನೊ ರೊನಾಲ್ಡೊ- 900 (ಪೋರ್ಚುಗಲ್)
* ಲಿಯೋನೆಲ್‌ ಮೆಸ್ಸಿ - 842 (ಅರ್ಜೆಂಟೀನಾ)
* ರುಬೆಲ್‌ ಡಿಯಾಸ್‌– 769 (ಪೋರ್ಚುಗಲ್)
* ಪೀಲೆ- 765 (ಬ್ರೆಜಿಲ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.