ADVERTISEMENT

ದಾಖಲೆ ಮೊತ್ತಕ್ಕೆ ಸೌದಿಯ ಅಲ್ ನಾಸರ್ ಕ್ಲಬ್ ಸೇರಿದ ರೊನಾಲ್ಡೊ

ಏಜೆನ್ಸೀಸ್
Published 31 ಡಿಸೆಂಬರ್ 2022, 5:27 IST
Last Updated 31 ಡಿಸೆಂಬರ್ 2022, 5:27 IST
ಕ್ರಿಸ್ಟಿಯಾನೋ ರೊನಾಲ್ಡೊ
ಕ್ರಿಸ್ಟಿಯಾನೋ ರೊನಾಲ್ಡೊ   

ನವದೆಹಲಿ: ಕಾಲ್ಚೆಂಡಿನ ಲೋಕದ ಜನಪ್ರಿಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಸೌದಿ ಅರೇಬಿಯಾದ ಅಲ್ ನಾಸರ್ ಫುಟ್‌ಬಾಲ್ ಕ್ಲಬ್‌ನೊಂದಿಗೆ ದಾಖಲೆ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

37 ವರ್ಷದ ರೊನಾಲ್ಡೊ ಅವರೊಂದಿಗೆ 2025 ಜೂನ್‌ವರೆಗೆ ಅಂದಾಜು ₹1,770 ಕೋಟಿ ಮೊತ್ತಕ್ಕೆ (200 ಮಿಲಿಯನ್ ಯುರೋ) ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಅಲ್ ನಾಸರ್ ಕ್ಲಬ್‌ನೊಂದಿಗೆ ರೊನಾಲ್ಡೊ ತಮ್ಮ ಮೆಚ್ಚಿನ ಏಳು ನಂಬರ್ ಜೆರ್ಸಿಯನ್ನು ಹಿಡಿದಿರುವ ಚಿತ್ರವನ್ನು ಅಭಿಮಾನಿಗಳಿಗಾಗಿ ಕ್ಲಬ್ ಹಂಚಿಕೊಂಡಿದೆ.

ADVERTISEMENT

ಇತಿಹಾಸ ರಚನೆಯಾಗಿದೆ. ನಮ್ಮ ಕ್ಲಬ್ ಇನ್ನಷ್ಟು ಯಶಸ್ಸನ್ನು ಸಾಧಿಸಲು ಮತ್ತು ಭವಿಷ್ಯದ ಪೀಳಿಗೆಯ ಆಟಗಾರರಿಗೆ ಸ್ಪೂರ್ತಿಯಾಗಲು ರೊನಾಲ್ಡೊ ಅವರೊಂದಿಗಿನ ಒಪ್ಪಂದ ನೆರವಾಗಲಿದೆ ಎಂದು ಸ್ಟಾರ್ ಆಟಗಾರನಿಗೆ ಸ್ವಾಗತ ಕೋರಿ ಅಲ್ ನಾಸರ್ ಕ್ಲಬ್ ಟ್ವೀಟ್ ಮಾಡಿದೆ.

ಹೊಸ ದೇಶದಲ್ಲಿ ಫುಟ್‌ಬಾಲ್ ಶೋಧನೆ ಮಾಡಲು ಉತ್ಸುಕನಾಗಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಮತ್ತಷ್ಟು ಯಶಸ್ಸನ್ನು ಸಾಧಿಸಬಹುದು ಎಂದು ರೊನಾಲ್ಡೊ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಕತಾರ್‌ನಲ್ಲಿ ಅಂತ್ಯಗೊಂಡ ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ರೊನಾಲ್ಡೊ ಅವರ ಪೋರ್ಚುಗಲ್ ತಂಡವು ಕ್ವಾರ್ಟರ್ ಹಂತದಲ್ಲೇ ನಿರ್ಗಮಿಸಿತ್ತು. ಇದೇ ಸಂದರ್ಭದಲ್ಲಿ ಮ್ಯಾಚೆಂಸ್ಟರ್ ಯುನೈಟೆಡ್ ತಂಡವನ್ನು ತೊರೆಯುವ ನಿರ್ಧಾರ ಪ್ರಕಟಿಸಿದ್ದರು.

ರೊನಾಲ್ಡೊ ತಮ್ಮ ವೃತ್ತಿ ಜೀವನದಲ್ಲಿ ಮ್ಯಾಚೆಂಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಮತ್ತು ಜುವೆಂಟಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಏಷ್ಯಾದ ಯಶಸ್ವಿ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಅಲ್ ನಾಸರ್ ಸೌದಿ ಅರೇಬಿಯನ್ ಲೀಗ್‌ನಲ್ಲಿ ಒಂಬತ್ತು ಬಾರಿ ಚಾಂಪಿಯನ್ ಎನಿಸಿಕೊಂಡಿದೆ. 2019ರಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.