ಖ್ಯಾತ ಫುಟ್‌ಬಾಲ್ ತಾರೆ ಪೋರ್ಚುಗಲ್‌ನ ಕ್ರಿಸ್ತಿಯಾನೋ ರೊನಾಲ್ಡೊ ಅವರ ಅಲ್‌ನಸ್ರ್ ಕ್ಲಬ್ ಸೇರ್ಪಡೆ ಕಾರ್ಯಕ್ರಮವು , 2022ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕಿಂತ ಹೆಚ್ಚಿನ ವೀಕ್ಷಕರನ್ನು ಸೆಳೆದಿದೆ ಎಂದು ವರದಿಯಾಗಿದೆ.
ಸೌದಿ ಅರೇಬಿಯಾದ ಅಲ್ ನಸ್ರ್ ಫುಟ್ಬಾಲ್ ಕ್ಲಬ್ ಜತೆ ಒಪ್ಪಂದ ಮಾಡಿಕೊಂಡಿರುವ ರೊನಾಲ್ಡೋ ಅವರಿಗೆ ಜನವರಿ 3 ರಂದು ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಸುಮಾರು 300 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಸುಮಾರು 40 ಚಾನೆಲ್‌ಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ನಡೆದಿದೆ‘ ಎಂದು ಸ್ಪ್ಯಾನಿಶ್ ಪತ್ರಕರ್ತ ಪೆರ್ಡೊ ಸೆಪುಲ್ವೆಡಾ ಅವರು ತಿಳಿಸಿದ್ದಾರೆ.
ಫ್ರಾನ್ಸ್ ಹಾಗೂ ಅರ್ಜೆಂಟೀನಾ ನಡುವೆ ನಡೆದ 2022ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ವಿಶ್ವದಾದ್ಯಾಂತ ಸುಮಾರು 250 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು.
ಆ ಪಂದ್ಯದಲ್ಲಿ ಲಯೊನೆಲ್ ಮೆಸ್ಸಿ, ಕಿಲಿಯನ್ ಎಂಬಾಪೆಯಂತಹ ಘಟಾನುಘಟಿ ಆಟಗಾರರು ಇದ್ದರು.
ಕೆಲ ದಿನಗಳ ಹಿಂದಷ್ಟೇ 37 ವರ್ಷದ ರೊನಾಲ್ಡೊ ಅವರೊಂದಿಗೆ ಅಂದಾಜು ₹1,770 ಕೋಟಿ ಮೊತ್ತಕ್ಕೆ (200 ಮಿಲಿಯನ್ ಯುರೋ) ಅಲ್ ನಸ್ರ್ ಫುಟ್ಬಾಲ್ ಕ್ಲಬ್ ಒಪ್ಪಂದ ಮಾಡಿಕೊಂಡಿತ್ತು. 2025 ಜೂನ್‌ವರೆಗೆ ಈ ಒಪ್ಪಂದ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.