ದೋಹಾ: ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ತಂಡಫ್ರಾನ್ಸ್, ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಸೆಮಿಪೈನಲ್ ಪ್ರವೇಶಿಸಿತು.
ಅಲ್ ಖೊರ್‌ನಲ್ಲಿರುವ ಅಲ್ ಬೈತ್ ಕ್ರೀಡಾಂಗಣದಲ್ಲಿಶನಿವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ 2–1 ಗೋಲುಗಳ ಅಂತರದಲ್ಲಿಬಲಿಷ್ಠ ಇಂಗ್ಲೆಂಡ್ ತಂಡವನ್ನು ಫ್ರಾನ್ಸ್ ಮಣಿಸಿತು.
ಸಮಬಲದ ಪೈಪೋಟಿ ಇದ್ದ ಈ ಪಂದ್ಯದಲ್ಲಿ ಫ್ರಾನ್ಸ್ ತಂಡದ ಸ್ಟ್ರೈಕರ್‌ಗಳು ಮತ್ತು ಇಂಗ್ಲೆಂಡ್‌ನ ಡಿಫೆಂಡರ್‌ಗಳ ರಕ್ಷಣಾ ಕೋಟೆ ಉರುಳಿಸಿಎರಡು ಗೋಲುಗಳನ್ನು ಹೊಡೆದರು. ಆದರೆ ಇಂಗ್ಲೆಂಡ್ ತಂಡ ಒಂದು ಗೋಲು ಹೊಡೆಯುವಲ್ಲಿ ಮಾತ್ರ ಯಶಸ್ವಿಯಾಯಿತು.
ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡಿದ್ದ ಇಂಗ್ಲೆಂಡ್ ತಂಡದ ಆಟ ಫ್ರಾನ್ಸ್ ಎದುರು ನಡೆಯಲಿಲ್ಲ. ಅಂತಿಮವಾಗಿ ಹಾಲಿಚಾಂಪಿಯನ್ ಎದುರು ಇಂಗ್ಲೆಂಡ್ ಕನಸು ಭಗ್ನಗೊಂಡಿತು.
ಫ್ರಾನ್ಸ್ ತಂಡ ಸೆಮಿಫೈನಲ್‌ನಲ್ಲಿ ಮೊರಕ್ಕೊ ತಂಡವನ್ನು ಎದುರಿಸಲಿದೆ.
ಇಂಗ್ಲೆಂಡ್ ಮತ್ತು ಫ್ರಾನ್ಸ್ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಈ ಹಿಂದೆ ಎರಡುಸಲ ಎದುರಾಗಿದ್ದು, ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಜಯಿಸಿತ್ತು. 1966ರ ಟೂರ್ನಿಯ ಗುಂಪು ಹಂತದ ಪಂದ್ಯವನ್ನು 2–0 ಗೋಲುಗಳಿಂದ ಹಾಗೂ 1982ರ ಟೂರ್ನಿಯ ಪಂದ್ಯವನ್ನು 3–1 ಗೋಲುಗಳಿಂದ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.